Thursday, July 30, 2026

BDA Apartments

Home Front Page ಬಿಜೆಪಿಗೆ ಸೇರ್ಪಡೆಯಾದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್….

ಬಿಜೆಪಿಗೆ ಸೇರ್ಪಡೆಯಾದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್….

ನವದೆಹಲಿ,ಡಿ,29,2020(www.justkannada.in): ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನ್ಯಾ ನೆಹ್ವಾಲ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಿರಿಯ ಸೋದರಿ ಚಂದ್ರಾಂಶು ಜತೆ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದರು.  ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ  ಸೈನಾ ನೆಹ್ವಾಲ್ ಬಿಜೆಪಿ ಸೇರ್ಪಡೆಯಾದರು.

ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ತಾರಾ ಪ್ರಚಾರಕರಾಗಿ ಸೈನಾ ನೆಹ್ವಾಲ್  ಅವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬ್ಯಾಡ್ಮಿಂಟನ್‌ನಲ್ಲಿ 11 ಸೂಪರ್ ಸೀರೀಸ್ ಸೇರಿದಂತೆ 24 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸೈನಾ ಗೆದ್ದಿದ್ದಾರೆ.

Key words: badminton star -Saina Nehwal- Join- BJP