Sunday, September 20, 2026

BDA Apartments

ಬ್ಯಾಡ್ಮಿಂಟನ್: ಪದಕದತ್ತ ಪಿವಿ ಸಿಂಧು ಹೆಜ್ಜೆ BDA JK_Adv BDA Adv
Home Front Page ಬ್ಯಾಡ್ಮಿಂಟನ್: ಪದಕದತ್ತ ಪಿವಿ ಸಿಂಧು ಹೆಜ್ಜೆ

ಬ್ಯಾಡ್ಮಿಂಟನ್: ಪದಕದತ್ತ ಪಿವಿ ಸಿಂಧು ಹೆಜ್ಜೆ

ಬೆಂಗಳೂರು, ಜುಲೈ 30, 2021 (www.justkannada.in): ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಆರ್ಚರಿಯಲ್ಲಿ ಅತನು ದಾಸ್, ಭಾರತ ಹಾಕಿ ತಂಡ ಗೆಲುವಿನ ಹಾದಿಯಲ್ಲಿ ಮುನ್ನಡೆದು ಪದಕದ ಭರವಸೆ ಉಳಿಸಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ ದಿನವೇ ಬೆಳ್ಳಿ ಪದಕ ಗೆದ್ದ ಭಾರತ ನಂತರದ 5 ದಿನಗಳಲ್ಲಿ ಒಂದೂ ಪದಕ ಗೆಲ್ಲದೇ ನಿರಾಸೆ ಮೂಡಿಸಿದೆ. ಆರ್ಚರಿ, ಶೂಟಿಂಗ್, ವನಿತೆಯರ ಹಾಕಿ ಸೇರಿದಂತೆ ಹಲವು ವಿಭಾಗಗಳಲ್ಲಿ ಎಡವಿದೆ. ಆದರೆ ಪದಕದ ಭರವಸೆ ಮೂಡಿಸಿದ್ದ ಕೆಲವು ಸ್ಪರ್ಧಿಗಳು ತಮ್ಮ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

ಆರ್ಚರಿ ರಿರ್ಕ್ಯೂ ವಿಭಾಗದಲ್ಲಿ ಭಾರತದ ಅತನು ದಾಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ 16ರ ಘಟ್ಟದ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಿನ್ ಯೆಕ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಜಪಾನ್ ನ ಟಕಹರು ಫುರುಕೊವಾ ಅವರನ್ನು ಎದುರಿಸಲಿದ್ದಾರೆ.