Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಸಿಎಂ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಮತ್ತು ದೇವಸ್ಥಾನ ಭೇಟಿ ಕುರಿತು ರೈತ ಸಂಘದ ರಾಜ್ಯಾಧ್ಯಕ್ಷ...

ಸಿಎಂ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಮತ್ತು ದೇವಸ್ಥಾನ ಭೇಟಿ ಕುರಿತು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕೆ….

ಮೈಸೂರು,ಮೇ,13,2019(www.justkannada.in): ಸಿಎಂ  ಹೆಚ್.ಡಿಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ  ಮತ್ತು ದೇವಸ್ಥಾನಗಳಿಗೆ ಭೇಟಿ ಕುರಿತು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿಜವಾದ ದೇವರು ಅಂದರೆ ಅದು ರೈತರು ಮತ್ತು ಜನರು. ಅವರ ಬಳಿ ಇರುವುದನ್ನು ಬಿಟ್ಟು ದೇವಸ್ಥಾನ , ರೆಸಾರ್ಟ್ ಗಳಿ ತೆರಳುತ್ತಿದ್ದಾರೆ. ಸೋಲು ಗೆಲುವಿನ ಗುಂಗಿನಲ್ಲಿ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ ಎಂದು ಬಡಗಲಾಪುರ ನಾಗೇಂದ್ರ  ಕಿಡಿಕಾರಿದ್ದಾರೆ.

ಸಿಎಂ ಹೆಚ್.ಡಿ  ಕುಮಾರಸ್ವಾಮಿ ನಡೆ ಟೀಕಿಸಿದ ಬಡಗಲಾಪುರ ನಾಗೇಂದ್ರ, ಹಲವಾರು ತಾಲ್ಲೂಕುಗಳಲ್ಲಿ ಬರ ಇದೆ. ಸರಿಯಾದ ಸಮಯದಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜಕಾರಣಿಗಳು ಸ್ವಾರ್ಥಕ್ಕೊಸ್ಕರ ಹೋರಾಡ್ತಾ ಇದ್ದಾರೆ. ನಿಜದ ದೇವರಾದ ಜನರು ಮತ್ತು ರೈತರ  ಬಳಿ ಇರದೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೋಮ ಹವನ ಮಾಡುತ್ತಾ ಬಿಜಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Badagalupura- Nagendra -criticized -HD Kumaraswamy- resort – temple -visit.