ಬಿ.ವೈ.ವಿಜಯೇಂದ್ರ ಬಿಜೆಪಿ ಟೆಂಪ್ರವರಿ ಅಧ್ಯಕ್ಷ: ಎಂ.ಲಕ್ಷಣ್ .

ಮೈಸೂರು, ನವೆಂಬರ್ 12, 2023 (www.justkannada.in): ಬಿ. ವೈ. ವಿಜಯೇಂದ್ರ ಜೂನ್ ನಂತರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲ್ಲ. ಅವರು ಬಿಜೆಪಿಯ ತಾತ್ಕಾಲಿಕ ಅಧ್ಯಕ್ಷ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಯಿಂದ ದೂರ ಉಳಿಯಿತು. ಆಗಾಗಿ ಮತ್ತೆ ಲೋಕಸಭೆಯಲ್ಲಿ ವೀರಶೈವ ಲಿಂಗಾಯತ ಮತಗಳ ಕೃಡಿಕರಣಕ್ಕೆ ಮುಂದಾಗಿದ್ದಾರೆ.
ನರೇಂದ್ರ ಮೋದಿ,ಅಮಿತ್ ಶಾ,ಬಿ ಎಲ್ ಸಂತೋಷ್ ರವರ ನಾಟಕೀಯ ಬೆಳವಣಿಗೆ. ಜೂನ್ ನಂತರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲ್ಲ ಅಂತ ವಿಜಯೇಂದ್ರ, ಯಡಿಯೂರಪ್ಪಗೂ ತಿಳಿದಿದೆ‌ ಎಂದರು.

ಬಿಜೆಪಿ ಅನೇಕ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನ ಮೂಲೆ ಗುಂಪು ಮಾಡಲಾಯಿತು. ಸೋಮಣ್ಣ, ಯತ್ನಾಳ್, ಬಿಸಿ ಪಾಟೀಲ್, ಮುರುಗೇಶ್ ನಿರಾಣಿ, ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರನ್ನ ಮೂಲೆ ಗುಂಪು ಮಾಡಲಾಯಿತು.ಈಗ ವಿಜಯೇಂದ್ರರನ್ನ ಮುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಎಂ ಲಕ್ಷ್ಮಣ್ ಹೇಳಿದರು.

ಪ್ರತಾಪ್ ಸಿಂಹ, ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸುತ್ತೇವೆ ಎಂದಿದ್ದರು. ಮೋದಿಯವರ ವರ್ಚಸ್ಸಿನಲ್ಲಿ ಚುನಾವಣೆ ಗೆಲ್ಲುತ್ತೆವೆ ಎನ್ನುತ್ತಿದ್ದರು. ನೀವು ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೀರಾ?
ಜನ 2024ರ ಚುನಾವಣೆಗಾಗಿ ಕಾಯುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ನಿಮ್ಮ ಇಂಟೆಲಿಜೆನ್ಸ್ ಮಾಹಿತಿ ಪ್ರಕಾರ ರಾಜ್ಯದಲ್ಲಿ ಲೋಕಸಭೆಯಲ್ಲಿ 2ಸ್ಥಾನ ಮಾತ್ರ ಗೆಲ್ಲೋದು ಅಂತ ಇದೆ. ನಿಮ್ಮ ಇಂಟೆಲಿಜೆನ್ಸ್ ಮಾಹಿತಿಯನ್ನ ಸ್ವಲ್ಪ ಲೀಕ್ ಮಾಡಿ. ದಿನೇ ದಿನೇ ಮೋದಿಯವರ ವರ್ಚಸ್ಸು ಕುಸಿಯುತ್ತಿದೆ. ಜನ ನಿಮ್ಮ ಸುಳ್ಳನ್ನ ನಂಬುವ ಪರಿಸ್ಥಿತಿಯಲ್ಲಿಲ್ಲ ಎಂದು ಟೀಕಿಸಿದರು.

  1. ಬಿಜೆಪಿ ಬರ ಅಧ್ಯಯನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ತುಮಕೂರಿನ ಹಳ್ಳಿಯಲ್ಲಿ ಬರ ಅಧ್ಯಯನ ಮಾಡಿದ್ದು ಒಂದುವರೆ ನಿಮಿಷ.ಇದು ಇವರ ಬರ ಅಧ್ಯಯನ ನಾಚಿಕೆ ಆಗಬೇಕು ಬಿಜೆಪಿ ಯವರಿಗೆ.
    ಕರ್ನಾಟಕದಲ್ಲಿ 26 ಜನ ಎಂ.ಪಿ ಗಳಿದ್ದು ನರೇಂದ್ರ ಮೋದಿಗೆ ಬರದ ವಿಚಾರವಾಗಿ ಒಂದು ಪತ್ರ ಬರೆಯುವ ಕೆಲಸ ಮಾಡಿಲ್ಲ.
    ನರೇಂದ್ರ ಮೋದಿ ನಿಮ್ಮನ್ನು ಹತ್ತಿರವೇ ಬಿಡುವುದಿಲ್ಲ.
    ಆದರೆ ಬರದ ಪರಿಸ್ಥಿತಿ ತಿಳಿಸಿ ರಾಜ್ಯಕ್ಕೆ ಹಣ ಕೊಡಿಸುವ ಉದಾರತೆ ಇಲ್ಲದೇ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಾ ಓಡಾಡುತ್ತಿದ್ದೀರ. ಇಂದಿನಿಂದ ಜೆಡಿಎಸ್ ಕೂಡ ಬರ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕುಮಾರಸ್ವಾಮಿ, ದೇವಗೌಡರಿಗೆ ಬಿಜೆಪಿ ಹೈಕಮಾಂಡ್ ಸುಲಭವಾಗಿ ಸಿಗುತ್ತಾರೆ. ಕೇಂದ್ರ ಬಳಿ ಮಾತನಾಡಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸಿ ಎಂದು‌ ವ್ಯಂಗ್ಯವಾಡಿದರು.