Friday, July 31, 2026

BDA Apartments

Home Front Page ಬರೀ ಘೋಷಣೆಯೊಂದೇ ದೊಡ್ಡ ಸಾಧನೆಯೇನಲ್ಲ , ಮಾಜಿ ಸಿಎಂ ಎಚ್ಡಿಕೆಗೆ ಟಾಂಗ್ ಕೊಟ್ಟ ಕೃಷಿ ಸಚಿವ...

ಬರೀ ಘೋಷಣೆಯೊಂದೇ ದೊಡ್ಡ ಸಾಧನೆಯೇನಲ್ಲ , ಮಾಜಿ ಸಿಎಂ ಎಚ್ಡಿಕೆಗೆ ಟಾಂಗ್ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ್.

 

ಹಾವೇರಿ,ಮಾ‌.7, 2020 : (www.justkannada.in news) ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿಹೋದರೆ ಹೊರತು ಅದಕ್ಕಾಗಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಿಲ್ಲ.ಬಾಯಿಗೆ ಬಂದಂತೆ ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಿರೇಕೆರೂರಿನಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದಿಷ್ಟು…

b.c.patil-haveri-bjp-minister-hdk

ಸರಿಯಾಗಿ ಯೋಜನೆ ರೂಪಿಸದೇ ಕುಮಾರಸ್ವಾಮಿ ಬಾಯಿಗೆಬಂದಂತೆ ಸಾಲಮನ್ನಾ ಘೋಷಣೆ ಮಾಡಿಹೋಗಿದ್ದಾರೆ. ಈಗ ರೈತರ ಸಾಲಮನ್ನಾ ಖೋತಾ ಆಗಿದೆ ಎಂದು ಕುಮಾರಸ್ವಾಮಿ ಅಪಪ್ರಚಾರ ಶುರುಮಾಡಿದ್ದಾರೆ.ಯಾವುದೇ ರೈತರಿಗೂ ಸರ್ಕಾರ ಅನ್ಯಾಯ ಮಾಡುವುದಿಲ್ಲ.ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಬಾಯಿಗೆ ಬಂದಂತೆ ಘೋಷಿಸುವುದು ಬಾಯಿಗೆ ಬಂದಂತೆ ಜನರಿಗೆ ಕುಮಾರಸ್ವಾಮಿ ಅವರು ಆಶ್ವಾಸನೆ ಕೊಟ್ಟು ಹೋಗಿದ್ದಾರೆ.ಈಗ ಅದನ್ನು ತೀರಿಸುವ ಕೆಲಸವನ್ನು ಯಡಿಯೂರಪ್ಪನವರು ಮಾಡುತ್ತಿದ್ದಾರೆ.ಘೋಷಣೆ ಮಾಡಿ ಹೋಗುವುದಕ್ಕಿಂತ ನುಡಿದಂತೆ ನಡೆದುಕೊಳ್ಳುವುದು ಮುಖ್ಯ ಎಂದರು.

b.c.patil-haveri-bjp-minister-hdk

ರೈತರ ಸಾಲ ಮನ್ನಾ ಹಂತಹಂತವಾಗಿ ದಾಖಲಾತಿ ಪರಿಶೀಲಿಸಲಾಗುತ್ತಿದೆ.ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ ವಿರೋಧ ಪಕ್ಷ ಸ್ಥಾನದಲ್ಲಿದ್ದಾರೆ.ಹೀಗಾಗಿ ವಿರೋಧ ಮಾಡುವುದು ಅವರ ಆಜನ್ಮ ಸಿದ್ಧ ಹಕ್ಕು ಎಂದು ತಿಳಿದುಕೊಂಡಿದ್ದಾರೆ.ಇರುವ ಇತಿಮಿತಿಯ ಅನುದಾನದಲ್ಲಿಯೇ ಯಡಿಯೂರಪ್ಪನವರು ಸಮತೋಲನ ಬಜೆಟ್ ನೀಡಿದ್ದಾರೆ.ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ‌ ಬಜೆಟ್‌ನಲ್ಲಿ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

key words : b.c.patil-haveri-bjp-minister-hdk