ಮೈಸೂರಿನಲ್ಲಿ ಆಯುಷ್ ಕೋವಿಡ್-19 ಆರೈಕೆ ಕೇಂದ್ರ ಉದ್ಘಾಟನೆ…

ಮೈಸೂರು,ಸೆಪ್ಟಂಬರ್,19,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ  ಹೆಚ್ಚುತ್ತಿರುವ ಹಿನ್ನಲೆ ಆಯುಷ್ ಇಲಾಖೆಯಿಂದ ಕೆಎಸ್ ಒಯುನಲ್ಲಿ ಕೋವಿಡ್-19 ಆರೈಕೆ ಕೇಂದ್ರವನ್ನ ತೆರೆಯಲಾಗಿದೆ.Ayush -Kovid-19- Care Center- Open - Mysore.

ಮೈಸೂರಿನ ಕೆಎಸ್ಒಯುನಲ್ಲಿ ಪ್ರಾರಂಭಿಸಲಾಗಿರುವ ಆಯುಷ್ ಕೋವಿಡ್ ಕೇರ್ ಸೆಂಟರ್ ಅನ್ನ ಶಾಸಕ ಎಲ್. ನಾಗೇಂದ್ರ ಉದ್ಘಾಟಿಸಿದರು.  ಈ ಕೋವಿಡ್ ಆರೈಕೆ ಕೇಂದ್ರ ಆಯುಷ್ ಇಲಾಖೆಯಿಂದ ನಿರ್ಮಾಣವಾಗಿದ್ದು, ಇಲ್ಲಿ ಕೊರೋನಾ ಸೋಂಕಿತರಿಗೆ ಎರಡು ವಿಭಾಗದಲ್ಲಿ ಚಿಕಿತ್ಸೆ‌ ನೀಡಲಾಗುತ್ತದೆ.  ಹಸಿರು ವಲಯ ಮತ್ತು ಕೆಂಪು ವಲಯ ಎರಡು ವಲಯಗಳಲ್ಲಿ ಕೊರೋನಾ ಸೋಂಕಿತರನ್ನ ಆರೈಕೆ ಮಾಡಲಾಗುತ್ತದೆ.

Key words: Ayush -Kovid-19- Care Center- Open – Mysore.