ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಿಂದ ಜಾಗೃತಿ ನಾಟಕ ಪ್ರದರ್ಶನ

ಮೈಸೂರು, ಸೆಪ್ಟೆಂಬರ್ 12, 2023 (www.justkannada.in): ನಗರದ ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಿಂದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಜಾಗೃತಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗವು ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಪ್ರಯುಕ್ತ ಸೆಪ್ಟೆಂಬರ್ 9ರಂದು ಅನಾರೋಗ್ಯಕರ ಆಹಾರ ಸೇವನೆಯ ದುಷ್ಪರಿಣಾಮಗಳನ್ನುತಿಳಿಸಲು ‘ಫ್ಲ್ಯಾಷ್‌ ಮಾಬ್ಮತ್ತು’ ನಾಟಕ ಪ್ರದರ್ಶನ ಮಾಡಲಾಯಿತು.

ಜೆಎಸ್‌ ಎಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಮಾಲ್ ಆಫ್ ಮೈಸೂರು ಮತ್ತು ಮೈಸೂರಿನ ನೆಕ್ಸಸ್ ಮಾನಲ್ಲಿ ನಾಟಕ ಪ್ರದರ್ಶಿಸಿದರು.  ಎರಡೂ ಮಾಲ್‌ಗಳಿಗೆ ಭೇಟಿ ನೀಡಿದ ಸಾರ್ವಜನಿಕರು ನಾಟಕ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.