‘ಅವನೇ ಶ್ರೀಮನ್ನಾರಾಯಣ’ ಟೀಸರ್ ಬಿಡುಗಡೆ ಲೇಟ್: ಕ್ಷಮೆ ಕೋರಿದ ಚಿತ್ರ ತಂಡ

ಬೆಂಗಳೂರು, ಜೂನ್ 07, 2019 (www.justkannada.in): ಹೇಳಿದ್ದ ಸಮಯಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಬರದೇ ಇದ್ದದ್ದು ಕೆಲವು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು.

ಇದಕ್ಕಾಗಿ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕನಟ ಸೇರಿದಂತೆ ಚಿತ್ರತಂಡದವರು ಪ್ರೇಕ್ಷಕರಿಗೆ ಕ್ಷಮೆ ಕೋರಿದ್ದಾರೆ.

‘ಟೀಸರ್ ತಡವಾಗಿದ್ದಕ್ಕೆ ಕ್ಷಮೆ ಇರಲಿ. ಇನ್ನೊಂದು 15 ನಿಮಿಷಗಳಲ್ಲಿ ಟೀಸರ್ ಬಿಡುಗಡೆಯಾಗಲಿದೆ’ ಎಂದು ರಕ್ಷಿತ್ ಶೆಟ್ಟಿ ಟ್ವೀಟರ್ ನಲ್ಲಿ ವಿನಂತಿಸಿಕೊಂಡರು. ಕೊನೆಗೆ ಈ ಟೀಸರ್ ಸರಿಯಾಗಿ ಮಧ್ಯರಾತ್ರಿ 12 ಗಂಟೆಗೆ ರಿಲೀಸ್ ಆಯಿತು.

ಇನ್ನು ತಡ ರಾತ್ರಿ ಬಿಡುಗಡೆಯಾದರೂ ಟೀಸರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿಂದೆ ಚಿತ್ರದ ಒಂದು ಟೀಸರ್ ಬಂದಿದ್ದು, ಈಗ ಎರಡನೇ ಟೀಸರ್ ಕೂಡ ಸೂಪರ್ ಆಗಿದೆ.