ಆಸ್ಟ್ರೇಲಿಯನ್ ಓಪನ್‌: ಮರಿಯಾ ಶರಪೋವಾಗೆ ವೈಲ್ಡ್ ಕಾರ್ಡ್ ಎಂಟ್ರಿ

ಮೆಲ್ಬರ್ನ್‌, ಜನವರಿ 09, 2019 (www.justkannada.in): ಆಸ್ಟ್ರೇಲಿಯನ್ ಓಪನ್‌ಗೆ ಮರಿಯಾ ಶರಪೋವಾಗೆ ವೈಲ್ಡ್ ಕಾರ್ಡ್ ಲಭಿಸಿದೆ.

ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾಗೆ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಕ್ಕಿರುವುದು ವಿಶೇಷ ಎಂದು ಶರಪೋವಾ ಹೇಳಿದ್ದಾರೆ.

2008ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ 32ರ ಹರೆಯದ ಶರಪೋವಾ ಕಳೆದ ವರ್ಷವಿಡೀ ಗಾಯದ ಸಮಸ್ಯೆಯನ್ನು ಎದುರಿಸಿದ್ದರು. ಇದೀಗ ಅವರು 147ನೇ ರ್ಯಾಂಕಿನಲ್ಲಿದ್ದು, ಅವರಿಗೆ ಟೂರ್ನಿಗೆ ನೇರ ಅರ್ಹತೆ ಪಡೆಯುವ ಅವಕಾಶವಿರಲಿಲ್ಲ.