ರಾಮನಗರ, ನವೆಂಬರ್,6,2024 (www.justkannada.in): ಚನ್ನಪಟ್ಟಣ ಉಪಚುನಾವಣೆ ಕಣ ರಂಗೇರಿದ್ದು ಎನ್ಡಿಎ ಮತ್ತು ಕಾಂಗ್ರೆಸ್ ನಡುವಿನ ಆರೋಪ-ಪ್ರತ್ಯಾರೋಪ ಜೋರಾಗಿದೆ. ಈ ಮಧ್ಯೆ ಪ್ರಚಾರದ ವೇಳೆ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಆಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ. 
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಪ್ರಚಾರದಲ್ಲಿ ತೊಡಗಿದ್ದ ಡಿ. ಕೆ ಸುರೇಶ್ ಅವರು ಹೆಚ್ ಡಿ ಕುಮಾರಸ್ವಾಮಿ ಕುರಿತ ಆಡಿಯೋ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ, ಅಭಿವೃದ್ಧಿಗೆ ಜನ ಮತ ಹಾಕಲ್ಲ, ಎಂಟು ದಿನದ ಹಿಂದೆ ಜನರ ಬಳಿ ಹೋಗಬೇಕು. ಚುನಾವಣಾ ತಂತ್ರ ಮಾಡಬೇಕು. ಜನರ ಬಳಿ ಹೆಚ್ಚು ಹೋಗಬಾಗರದು, 8 ದಿನದಲ್ಲಿ ಪ್ರಚಾರ ಮಾಡಬೇಕು ಎಂದು ಹೇಳಿದ್ದರು ಎಂದು ಡಿಕೆ ಸುರೇಶ್ ಲೇವಡಿ ಮಾಡಿದ್ದು ಈ ಸಂಬಂಧ ಆಡಿಯೋ ರಿಲೀಸ್ ಮಾಡಿದ್ದಾರೆ.
ಡಿಕೆ ಸುರೇಶ್ ಗೆ ಕೇಂದ್ರ ಸಚಿವ ಹೆಚ್ ಡಿಕೆ ತಿರುಗೇಟು
ತಮ್ಮ ವಿರುದ್ದ ಆಡಿಯೋ ಬಿಡುಗಡೆ ಮಾಡಿದ ಡಿ.ಕೆ ಸುರೇಶ್ ಗೆ ತಿರುಗೇಟು ಕೊಟ್ಟ ಹೆಚ್ ಡಿ ಕುಮಾರಸ್ವಾಮಿ, ಸಿಡಿ ಆಡಿಯೋ ವಿಡಿಯೋ ಬಿಡುವಂತಹ ಎಕ್ಸ್ ಫರ್ಟ್‌ಗಳು. ಅವರನ್ನು ಹಿಡಿಯಲು ಆಗುತ್ತಾ ? ಆಡಿಯೋ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು. ಒಂದು ವಾರದಿಂದ ಅದನ್ನು ಕಟಿಂಗ್ ಮಾಡಿ ಹಂಚುತ್ತಿದ್ದಾರೆ. ಅದು ನನ್ನ ಹೇಳಿಕೆಯಲ್ಲ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಇಸ್ಪೀಟ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರು 5 ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಅಂದ ವಿಚಾರದ ಬಗ್ಗೆ ಹೇಳಿದ್ದೆ. ಅದನ್ನು ಮದ್ದೂರು ವಿಷಯಕ್ಕೆ ಹೇಳಿದ್ದು ಎಂದು ಸ್ಪಷ್ಟಪಡಿಸಿದರು.
ನನ್ನ ಚುನಾವಣೆಯಲ್ಲಿ ಕಾರ್ಯಕರ್ತರೇ ಮತ ಕೇಳುತ್ತಾರೆ. ನಾನು ಆ ರೀತಿ ಮಾತನಾಡುವ ಅವಶ್ಯಕತೆ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದವರು ಇಂತವರಿಂದ ನಗಣ್ಯ ಆಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದೆ. ಕ್ಯಾಸೆಟ್ ಪುಲ್ ಪ್ಲೇ ಮಾಡಲು ಹೇಳಿ ಅವರ ಯೋಗ್ಯತೆ ಗೊತ್ತಾಗುತ್ತದೆ ಎಂದು ಹೆಚ್ ಡಿಕೆ ಟಾಂಗ್ ಕೊಟ್ಟರು.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ಇವರೆಲ್ಲಾ ಸಿಡಿ ಪ್ಲೈಯರ್ಸ್ ಆ ಸಂತತಿಯಲ್ಲಿ ಬಂದವರು. ಇದಕ್ಕೆಲ್ಲಾ ನಮ್ಮ ಜನ ಬೆಲೆ ಕೊಡುತ್ತಾರಾ ? ನಾನು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊರಟಿದ್ದೇನೆ. ಅವರು ಏನೇ ಮಾತನಾಡಿದರೂ ಚನ್ನಪಟ್ಟಣದ ಉತ್ತರ ಕೊಡುತ್ತಾರೆ ಎಂದು ಹೆಚ್ ಡಿಕೆ ತಿಳಿಸಿದರು.
Key words: Audio bomb, DK Suresh, Union Minister, HDK







