ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಸಂದೇಶ್ ಆಡಿಯೋ ಬಗ್ಗೆ ನಟ ದರ್ಶನ್ ಸ್ನೇಹಿತ ಹರ್ಷ ಪ್ರತಿಕ್ರಿಯಿಸಿದ್ದು ಹೀಗೆ.

ಮೈಸೂರು,ಜುಲೈ,17,2021(www.justkannada.in): ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೊಟೇಲ್ ನಲ್ಲಿ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಹೋಟೆಲ್ ಮಾಲೀಕ ಸಂದೇಶ್ ನಡುವಿನ ಆಡಿಯೋ ಸಂಭಾಷಣೆ ನಿನ್ನೆಯಿಂದ ವೈರಲ್ ಆಗಿದ್ದು ಈ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ, ಆಡಿಯೋದಲ್ಲಿ ಮಾತನಾಡಿರುವ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾದುದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿರುವ ಹರ್ಷ ಮೆಲಂಟಾ, ಅಂದು ದರ್ಶನ್ ಪಾರ್ಟಿ ಕೊಡುವಾಗ ನಾನು ಮತ್ತು ನನ್ನ  ಕುಟುಂಬ ಹೋಟೆಲ್ ಗೆ ಹೋಗಿದ್ವಿ. ಹೋಟೆಲ್ ನಲ್ಲಿ ಊಟ ಚೆನ್ನಾಗಿದೆ ಅಂತ ನಟ ದರ್ಶನ್ ಪಾರ್ಟಿ ಕೊಟ್ಟಿದ್ದರು. ಅಲ್ಲಿ 8 ಜನ ಮಾತ್ರ ಪಾರ್ಟಿಯಲ್ಲಿ ಇದ್ದೆವು. ನಾನು, ರಾಕೇಶ್, ದರ್ಶನ್ ಸೇರಿ ಎಂದೂ ಪಾರ್ಟಿ ಮಾಡಿಲ್ಲ. ಆದರೆ ಅಂದು ಹೋಟೆಲ್ ನಲ್ಲಿ ನಟ ದರ್ಶನ್ ಪಾರ್ಟಿ ಕೊಟ್ಟಿದ್ದರು.

ಈ ನಡುವೆ ಸರ್ವಿಸ್ ಮಾಡುವಾಗ ವ್ಯತ್ಯಾಸ  ಆಯ್ತು ಅಷ್ಟೆ. ಸಪ್ಲೇಯರ್  ಮೇಲೆ ನಟ ದರ್ಶನ್ ಹಲ್ಲೆ ಮಾಡಿಲ್ಲ. ಕೇವಲ ಬೈಯ್ದಿದ್ದರು. ಬಳಿಕ ಸಂದೇಶ್ ಅವರು ಅಲ್ಲಿಗೆ ಬಂದು ಎಲ್ಲರನ್ನೂ ಸಮಾಧಾನ ಮಾಡಿದ್ರು. ನಂತರ ನಾವು ರೂಂಗೆ ಹೋದೆವು. ಬೆಳಿಗ್ಗೆ ತಿಂಡಿ ತಿಂದು ಹೊರ ಬಂದೆವು. ದರ್ಶನ್ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ತಿಳಿಸಿದರು.

ಸಂದೇಶ್ ಹಾಗೂ ಇಂದ್ರಜಿತ್  ಲಂಕೇಶ್ ನಡುವಿನ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರ್ಷ ಮೆಲಂಟಾ, ಆಡಿಯೋ ಕೇಳಿದ್ರೆ ಇದು ಸಂದೇಶ್ ಅವರದ್ಧಲ್ಲ ಅನ್ನಿಸುತ್ತಿದೆ. ಸಂದೇಶ್ ಹಾಗೂ ನನ್ನ ನಡುವೆ ವ್ಯವಹಾರಿಕವಾಗಿ ಉತ್ತಮ ಸ್ನೇಹ ಇದೆ‌. ನಾನು ಸಂದೇಶ್ ಅವರನ್ನ ಅಣ್ಣ ಅಂತ ಯಾವತ್ತೂ ಕರೆದಿಲ್ಲ. ನಾನು ಯಾವ ಸಾಲವನ್ನೂ ಮಾಡಿಕೊಂಡಿಲ್ಲ. ಆಡಿಯೋದಲ್ಲಿ ಮಾತನಾಡಿರೋ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದರು.

ಹಾಗೆಯೇ ಈ ಸಂಬಂಧ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಿಚಾರಣೆಗೆ ಕರೆದಾಗ ನಾನು ಖಂಡಿತ ಹೋಗುತ್ತೇನೆ ಎಂದು ನಟ ದರ್ಶನ್ ಆಪ್ತ ಹರ್ಷ ಮೆಲಂಟಾ ತಿಳಿಸಿದರು.

Key words: Audio -between -director -Indrajit Lankesh – Sandesh-  Actor- Darshan’s –friend- Harsha