ನಡು ರಸ್ತೆಯಲ್ಲೇ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ತಲ್ವಾರ್ ನಿಂದ ಅಟ್ಯಾಕ್…

ಹುಬ್ಬಳ್ಳಿ ,ಡಿಸೆಂಬರ್,21,2020(www.justkannada.in): ನಡುರಸ್ತೆಯಲ್ಲೇ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ತಲವಾರಿನಿಂದ  ಹಲ್ಲೆ ಮಾಡಿದ್ದು ಈ ಘಟನೆಯಿಂದ ಹುಬ್ಬಳ್ಳಿ ಜನತೆ ಬೆಚ್ಚಿ ಬಿದ್ದಿದ್ದಾರೆ.Teachers,solve,problems,Government,bound,Minister,R.Ashok

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಈ ಘಟನೆ ಹಾಡಹಗಲೇ  ನಡೆದಿದೆ. ದೇಶಪಾಂಡೆ ನಗರದ ನಡು ರಸ್ತೆಯಲ್ಲೇ ಪಾಗಲ್ ಪ್ರೇಮಿ ಯುವತಿ ಮೇಲೆ ತಲವಾರಿನಿಂದ ಮನಬಂದಂತೆ ದಾಳಿ ನಡೆಸಿದ್ದಾನೆ. ಯುವತಿಯ ತಲೆಗೆ ತಲ್ವಾರ್ ನಿಂದ ಹಲ್ಲೆ ಮಾಡಿದ್ದು  ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.attack-talwar-pagal-lover-girl-hubbli

ಇನ್ನು ದಾಳಿ ನಡೆಸಿದ ಪಾಗಲ್ ಪ್ರೇಮಿಯನ್ನು ಕುಂದಗೋಳ ತಾಲೂಕಿನ ರಾಮನು ಗ್ರಾಮದವನಾಗಿದ್ದು, ದಾಳಿಗೊಳಗಾದ ಯುವತಿ ಧಾರವಾಡ ಜಿಲ್ಲೆಯ ಮೊರಬ ಗ್ರಾಮದವರು ಎಂದು ಗುರುತಿಸಲಾಗಿದೆ. ಸದ್ಯ ಸ್ಥಳಕ್ಕೆ  ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Attack – Talwar -Pagal lover –girl- hubbli