ಅಶ್ವಥ್ ನಾರಾಯಣ್ ಹೇಳಿಕೆ ಪ್ರಚೋದನಕಾರಿ ಹೌದೋ ಅಲ್ವೋ: ಸಮರ್ಥರಿದ್ದರೇ ಕೇಸ್ ದಾಖಲಿಸಿ- ಅರಗ ಜ್ಞಾನೇಂದ್ರಗೆ ಸಿದ್ಧರಾಮಯ್ಯ ಸವಾಲು.

ಬೆಂಗಳೂರು,ಫೆಬ್ರವರಿ,21,2023(www.justkannada.in): ಟಿಪ್ಪು ಹೊಡೆದಂತೆ ಸಿದ್ಧರಾಮಯ್ಯರನ್ನ ಹೊಡೆದು ಹಾಕೋಣ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಅವರ ಹೇಳಿಕೆ ಪ್ರಚೋದನಕಾರಿ ಹೌದೋ ಅಲ್ವೋ..? ನೀವು ಗೃಹ ಇಲಾಖೆ ನಡೆಸಲು ಅಸಮರ್ಥರು. ನೀವು ಸಮರ್ಥರಿದ್ದರೇ ಅಶ್ವತ್ ನಾರಾಯಣ್ ವಿರುದ್ದ ಕೇಸ್ ದಾಖಲಿಸಿ ಎಂದು ಅರಗ ಜ್ಞಾನೇಂದ್ರ ಅವರಿಗೆ  ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು ಹಾಕಿದರು.

ವಿಧಾನಸಭೆ ಅಧಿವೇಶನದಲ್ಲಿ ಅಶ್ವಥ್ ನಾರಾಯಣ್ ಹೇಳಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಟಿಪ್ಪು ತರ ಸಿದ್ದಾರಮಯ್ಯರನ್ನ ಮೇಲೆ ಕಳಿಸಿ ಅಂತಾರೆ.  ಅದಕ್ಕೆಲ್ಲಾ ನಾನು ಜಗ್ಗಲ್ಲ ಬಗ್ಗಲ್ಲ . ಯಾವ ಧರ್ಮವೂ ಹೊಡಿ ಬಡಿ ಎಂದು ಹೇಳಲ್ಲ.ಆದರೆ ಹತಾಶೆ ಸೋಲಿನ ಭಯದಿಂದ ಹೀಗೆ ಮಾತನಾಡುತ್ತಾರೆ. ಧಮ್ ತಾಕತ್ತಿದ್ದರೇ ನನ್ನನ್ನ ಹೊಡೆದು ಹಾಕಿ ನೋಡೋಣ. ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ಎಂದು ಟಾಂಗ್ ನೀಡಿದರು.

ಬಿಜೆಪಿ ನಾಯಕರು ಅಭಿವೃದ್ದಿ ಬಗ್ಗೆ ಚರ್ಚೆ ಮಾಡಲು ಸಿದ್ದರಿಲ್ಲ. ಅರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ ಅಶ್ವಥ್ ಹೇಳಿಕೆ ಪ್ರಚೋದನಾಕಾರಿ ಹೌದೋ ಅಲ್ವೂ . ಅರಗ ಅವರೇ ನೀವು ಒಳ್ಳೆಯವರು. ಆದರೆ ಗೃಹ ಇಲಾಖೆ ನಿರ್ವಹಿಸಲು ಅಸಮರ್ಥರು ಎಂದರು. ಈ ವೇಳೆ ಅರಗ ಜ್ಞಾನೇಂದ್ರ ಮಾತನಾಡಿ ನಿಮ್ಮ ಅವಧಿಗಿಂದಲೂ ನಾನು ಚೆನ್ನಾಗಿ ಇಲಾಖೆ ನಿರ್ವಹಿಸಿದ್ದೇನೆ. ನಾನು ಗೃಹ ಇಲಾಖೆ ನಿರ್ವಹಿಸಲು ಸಮರ್ಥನಿದ್ದೇನೆ ಎಂದರು.

Key words: Aswath Narayan-statement – Siddaramaiah –challenges- Araga jnanendra.