ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆ.

ನವದೆಹಲಿ,ಜನವರಿ,18,2023(www.justkannada.in):  ನಾಗಾಲ್ಯಾಂಡ್, ಮೇಘಾಲಯ ಹಾಗೂ ತ್ರಿಪುರಾ ವಿಧಾನಸಭೆ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗ  ದಿನಾಂಕ ಘೋಷಣೆ ಮಾಡಲಿದೆ.

ಇಂದು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿ ನಡೆಸಲಿರುವ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದಿನಾಂಕ ಪ್ರಕಟಿಸಲಿದ್ದಾರೆ. ಈ ವರ್ಷ ಕರ್ನಾಟಕ ಸೇರಿದಂತೆ 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಈ ನಡುವೆ ಇಂದು ಮೂರು ರಾಜ್ಯಗಳಿಗೆ ಚುನಾವಣೆ ಘೋಷಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

2024 ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ವರ್ಷ ನಡೆಯಲಿರುವ  ವಿಧಾನಸಭಾ ಚುನಾವಣೆ ಮಹತ್ವ ಪಡೆದಿದೆ.

Key words: assembly elections – three states – Date -announcement – today.