ಮೈಸೂರು ಮಹಾನಗರ ಪಾಲಿಕೆ ಸದಸ್ಯನ ಅಳಿಯನ ಮೇಲೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್….

ಮೈಸೂರು,ಮೇ,29,2020(www.justkannada.in): ಮೈಸೂರು ಮಹಾನಗರ ಪಾಲಿಕೆ ಸದಸ್ಯ ಪಂಡು ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ಫಂಡು ಅಳಿಯ ಶಹಬಾಜ್ ಮೇಲೆ  ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಉದಯಗಿರಿ ಅಲಬದರ್ ವೃತ್ತದ ಬಳಿ ಘಟನೆ ನಡೆದಿತ್ತು. ದಾಳಿಯಲ್ಲಿ ಶಹಬಾಜ್ ಎಡ ಭಾಗದ ಕೈಗೆ ಏಟು ಬಿದ್ದಿತ್ತು. ಇದೀಗ ಜೀವಕ್ಕೆ ತೊಂದರೆಯಾಗಬಹುದು ಎಂಬ ಉದ್ದೇಶದಿಂದ ವೈದ್ಯರು ಶಹಬಾಜ್  ಕೈಯನ್ನ ತೆಗೆದು ಹಾಕಿದ್ದಾರೆ,

ಶಹಬಾಜ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಹಲ್ಲೆ  ಪ್ರಕರಣದ ಮೂವರು ಆರೋಪಿಗಳನ್ನ ಉದಯಗಿರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.  ಮತ್ತಷ್ಟು ಮಂದಿ ಪತ್ತೆ ಹಚ್ಚಲು ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದೆ.

Key words: Assault – three – Arrest-police-mysore