ಪೊಲೀಸ್ ಪೇದೆಗೆ ಮಾರಣಾಂತಿಕ ಹಲ್ಲೆ: ಐವರ ವಿರುದ್ಧ FIR

ಮೈಸೂರು, ಆಗಸ್ಟ್,5,2025 (www.justkannada.in): ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಗೆ ಮಾರಣಾಂತಿಕ ಹಲ್ಲೆ  ಮಾಡಿರುವ ಘಟನೆ ನಡೆದಿದ್ದುಈ ಸಂಬಂಧ ಐವರ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಸೈಯ್ಯದ್‌ ಮನ್ಸೂರ್ ( 27) ಹಲ್ಲೆಗೆ ಒಳಗಾದ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದು ಮೈಸೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ‌ ನಡುವೆ ಪೇದೆ ಹೋರಾಟ ನಡೆಸುತ್ತಿದ್ದಾರೆ.  ಸೈಯ್ಯದ್‌ಮನ್ಸೂರ್ ಮೆದುಳಿಗೆ ತೀವ್ರ ಪೆಟ್ಟಾಗಿರುವ ಕಾರಣದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸೈಯ್ಯದ್‌ಮನ್ಸೂರ್ ರಾಮನಗರ ಪೊಲೀಸ್ ಕಾನ್ಸ್ ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮೂಲ ಮಂಡ್ಯದ ಕೆ.ಆರ್.ಪೇಟೆಯ ನಿವಾಸಿಯಾಗಿದ್ದಾರೆ. ಬೈಕ್ ರೇಸ್ ವೀಕ್ಷಣೆ ವೇಳೆ ಕಾಲು ಟಚ್ ಮಾಡಿದ್ದಕ್ಕೆ ಕಿರಿಕ್  ಆಗಿದ್ದು ಈ ವೇಳೆ ಕಿಡಿಗೇಡಿಗಳು ಸೈಯ್ಯದ್ ಮನ್ಸೂರ್ ಮೇಲೆ ದೊಣ್ಣೆ, ರಿಪೀಸ್ ಪಟ್ಟಿ, ಸೈಜ್ ಗಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ರೇಸ್ ಸ್ಥಳದಿಂದ ಅಟ್ಟಾಡಿಸಿಕೊಂಡು‌ ಹೋಗಿ ಹತ್ಯೆಗೆ ಯತ್ನಿಸಿದ್ದು ಡ್ರೋನ್ ಕ್ಯಾಮೆರಾದಲ್ಲಿ ಹಲ್ಲೆಯ ಇಂಚಿಂಚು‌ ದೃಶ್ಯಾವಳಿ ಸೆರೆಯಾಗಿದೆ.  ಕಳೆದ ವರ್ಷ ನಾಗಮಂಗಲದ ಗಲಭೆಗೆ ಕಾರಣವಾಗಿದ್ದವರು ಈ ರೀತಿ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ . ನಾಗಮಂಗಲದ ಗಣೇಶ ಗಲಾಟೆಯಲ್ಲಿ‌ ಭಾಗಿಯಾಗಿದ್ದ ಕಿಡಿಗೇಡಿಗಳು ಈ  ಹಲ್ಲೆ ನಡೆಸಿದ್ದು, ನಾಗಮಂಗಲದ ಮುತುಬೀರ್, ಅಜ್ಜು, ಬಾಲಿ ಸೇರಿ‌ ಐವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Key words: Fatal assault , police , FIR ,against ,five