ಮೈಸೂರು,ಆಗಸ್ಟ್,6,2025 (www.justkannada.in): ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ತರಗನಹಳ್ಳಿಯಲ್ಲಿ ನಡೆದಿದೆ.
ಡೈರಿ ಆವರಣದಲ್ಲೇ ಒಂದು ಗುಂಪಿನ ಮೇಲೆ ಮತ್ತೊಂದು ಗುಂಪು ಹಲ್ಲೆ ಮಾಡಿದ್ದು ಇಬ್ನರಿಗೆ ಗಾಯಗಳಾಗಿದೆ. ಕಳೆದ 17 ವರ್ಷದಿಂದ ಮಹೇಶ್ ಎಂಬುವವರು ಕಾರ್ಯದರ್ಶಿಯಾಗಿದ್ದರು. ನಂತರ ಮಹೇಶ್ ರನ್ನು ಅವ್ಯವಹಾರ ಆರೋಪದ ಮೇಲೆ ಅಮಾನತು ಮಾಡಿ ಮಹದೇವ ಪ್ರಸಾದ್ ಎಂಬುವವರನ್ನ ತಾತ್ಕಾಲಿಕ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
ಈ ಮಧ್ಯೆ ಮಹೇಶ್ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದು ಸಾಬೀತಾಗಿದ್ದು, ಮತ್ತೆ ಕಾರ್ಯದರ್ಶಿಯಾಗಿ ಮಹೇಶ್ ಮುಂದುವರೆಯಲು ಅಸಿಸ್ಟೆಂಟ್ ರಿಜಿಸ್ಟರ್ ಸಹಕಾರಿ ನ್ಯಾಯಾಲಯ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನೇಮಕವಾದ ಮಹದೇವ ಪ್ರಸಾದ್ ಎಂಬಾತನನ್ನು ಹುದ್ದೆಯಿಂದ ಕೈ ಬಿಡಲು ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಒತ್ತಾಯಿಸಿ ಮೇಲಧಿಕಾರಿಗಳಿಗೆ ಮನವಿ ಪತ್ರ ಕೊಡಲು ನಿರ್ಧಾರ ಮಾಡಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹದೇವ ಪ್ರಸಾದ್ ಮತ್ತು ಮಹೇಶ್ ಗುಂಪಿನ ನಡುವೆ ಗಲಾಟೆಯಾಗಿದ್ದುಪರಸ್ಪರ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದು, ಮಹದೇವ ಪ್ರಸಾದ್ ಕಡೆಯ ಗುಂಪಿನಿಂದ ಬಸವರಾಜಪ್ಪ ಮತ್ತು ಅವರ ಮಗ ಸದಾನಂದ ಎಂಬುವರ ಮೇಲೆ ಹಲ್ಲೆಯಾಗಿದ. ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: assault, between, two groups, Two injured, Mysore