ಪ್ರತಿಭಟನೆ ವೇಳೆ ಮಹಿಳಾ ASI ಚಿನ್ನದ ಸರ ಎಗರಿಸಿದ ಖದೀಮರು

ಶಿವಮೊಗ್ಗ,ಡಿಸೆಂಬರ್,18,2025 (www.justkannada.in): ಪ್ರತಿಭಟನೆಯ ವೇಳೆ ಮಹಿಳಾ ಎಎಸ್ ಐ ಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೋಟೆ ಪೊಲೀಸ್ ಠಾಣೆಯ ಎಎಸ್ ಐ ಅಮೃತಾ ಬಾಯಿ ಅವರ 60 ಗ್ರಾಂ ತೂಕದ ಚಿನ್ನದ ಸರವನ್ನ ಚೋರರು ಎಗರಿಸಿದ್ದಾರೆ ಎನ್ನಲಾಗಿದೆ. ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಎಎಸ್ ಐ ಅಮೃತಾ ಬಾಯಿ ಅವರ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿದ್ದು, ಪ್ರತಿಭಟನೆ ಮುಗಿದ ಬಳಿಕ ನೋಡಿಕೊಂಡಾಗ ಚಿನ್ನದ ಸರ ನಾಪತ್ತೆಯಾಗಿರುವ ಕುರಿತು ಅಮೃತಾ ಬಾಯಿಯವರಿಗೆ ತಿಳಿದು ಬಂದಿದೆ. ಈ ವೇಳೆ ಕಣ್ಣೀರು ಹಾಕುತ್ತಲೇ ಎಎಸ್ ಐ ಅಮೃತಾ ಬಾಯಿ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಘಟನೆ ನಡೆದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು. ಪ್ರತಿಭಟನೆಯ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮಾಧ್ಯಮಗಳ ವಿಡಿಯೋ ಕ್ಲಿಪ್ಪಿಂಗ್‌ ಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ  ಬಲೆ ಬೀಸಿದ್ದಾರೆ.

Key words: protest, ASI, gold chain, theft