ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ.

 

ಬೆಂಗಳೂರು,ಜುಲೈ,27,2021(www.justkannada.in): ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ಧಾರೆ.jk

ವಂಚಕ ಮಂಜುನಾಥ್ ಅಲಿಯಾಸ್ ಮಹಾಬಲ ಬಂಧಿತ ಆರೋಪಿ. ಜೊತೆಗೆ ಮಂಜುನಾಥ್‌ಗೆ ಸಹಾಯ ಮಾಡಿದ್ದ ಪೋಷಕರನ್ನೂ ಸಹ ಬಂಧಿಸಲಾಗಿದೆ.

ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆಂಜನೇಯ ದೇಗುಲದ ಅರ್ಚಕ ಮಂಜುನಾಥ್, ತನಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೊತ್ತು. ಅಧಿಕಾರಿಗಳು ಗೊತ್ತು ಎಂದು ಹೇಳಿ ಅಶ್ರಯ ಮನೆ ಕೊಡಿಸುವುದಾಗಿ ವಂಚನೆ ಮಾಡಿದ್ದ. ಈ ಬಗ್ಗೆ ತನಿಖೆ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದರು.

ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸುಬ್ರಮಣ್ಯಪುರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ವಂಚಕ ಮಂಜುನಾಥ್ ಅಲಿಯಾಸ್ ಮಹಾಬಲ, ಆತನ ತಂದೆ ಹಾಗೂ ತಾಯಿಯನ್ನು ಬಂಧಿಸಲಾಗಿದೆ.

 

Keywords: ashraya –scheme -Fraud – house – arrest accused-bangalore