Sunday, September 6, 2026

BDA Apartments

Home Cinema ‘ಮದಗಜ’ಕ್ಕಾಗಿ ಹಳ್ಳಿ ಹುಡುಗಿ ಆಗಿ ಬಂದ ಆಶಿಕಾ

‘ಮದಗಜ’ಕ್ಕಾಗಿ ಹಳ್ಳಿ ಹುಡುಗಿ ಆಗಿ ಬಂದ ಆಶಿಕಾ

ಬೆಂಗಳೂರು, ಫೆಬ್ರವರಿ 15, 2019 (www.justkannada.in): ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ನಾಯಕಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ ಚಿತ್ರ ತಂಡ ಉತ್ತರ ನೀಡಿದ್ದು ಆಶಿಕಾ ರಂಗನಾಥ್ ಎಂದು ಬಹಿರಂಗಪಡಿಸಿದೆ.

ನಾಯಕಿಯ ಹಿಂಭಾಗದ ಫೋಟೋ ನೋಡಿ ಹಲವರು ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಸಾನ್ವಿ ಶ್ರೀವಾಸ್ತವ್ ಎಂದೆಲ್ಲಾ ಊಹೆ ಮಾಡಿದ್ದರು. ಈಗ ನಿಜವಾದ ನಾಯಕಿ ಯಾರು ಎಂದು ಗೊತ್ತಾಗಿದ್ದು, ಫೆಬ್ರವರಿ 20 ರಿಂದ ಮದಗಜ ಚಿತ್ರೀಕರಣ ಆರಂಭವಾಗಲಿದೆ.

ಮದಗಜ ಸಿನಿಮಾದ ನಾಯಕಿ ಯಾರು ಎಂದು ಊಹಿಸಿ ಎಂದು ಚಿತ್ರತಂಡ ಒಂದು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿತ್ತು!