ರಾ ರಾ ರಕ್ಕಮ್ಮ ಸಾಂಗ್’ಗೆ ಆಶಿಕಾ ಭರ್ಜರಿ ಸ್ಟೆಪ್ !

ಬೆಂಗಳೂರು, ಮೇ 31, 2022 (www.justkannada.in): ರಾ ರಾ ರಕ್ಕಮ್ಮ ಸಾಂಗ್‌ಗೆ ನಟಿ ಆಶಿಕಾ ರಂಗನಾಥ್ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಗಡಂಗ್ ರಕ್ಕಮ್ಮನ ಲಿರಿಕಲ್ ವಿಡಿಯೋ ಸಾಂಗ್ ಸಾಕಷ್ಟು ಸದ್ದು ಮಾಡುತ್ತಿದೆ. ನಟ-ನಟಿಯರು ಇನ್ಸ್ಟಾ ರೀಲ್ ನಲ್ಲಿ ಈ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ.

ಈ ನಡುವೆ ನಟಿ ಆಶಿಕಾ ಕೂಡ ಡ್ಯಾನ್ಸ್ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹಾಡನ್ನು ಅನುಪ್ ಭಂಡಾರಿ ಬರೆದಿದ್ದಾರೆ. ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾತುರರಾಗಿದ್ದಾರೆ.