ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಆಶಿಕಾ ರೆಡಿ

ಬೆಂಗಳೂರು, ಆಗಸ್ಟ್ 05, 2021 (www.justkannada.in): ನಟಿ ಆಶಿಕಾ ರಂಗನಾಥ್ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ.

ಅಂದಹಾಗೆ ಇಂದಷ್ಟೇ ಚಿತ್ರವನ್ನು ಅನೌನ್ಸ್ ಮಾಡಲಾಗಿದ್ದು, ಜೊತೆಗೆ ಇಂದಿನಿಂದಲೇ ತಾಂಜಾವೂರಿನಲ್ಲಿ ಚಿತ್ರೀಕರಣವನ್ನೂ ಪ್ರಾರಂಭಿಸಲಾಗಿದೆ.

ಸತತ 50 ದಿನಗಳ ಶೆಡ್ಯೂಲ್ ಮಾಡಲಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಶೂಟಿಂಗ್ ಕಂಪ್ಲೀಟ್ ಆಗುವ ನಿರೀಕ್ಷೆಯಿದೆ.

ವಿಶೇಷ ಎಂದರೆ ತಮಿಳಿನಲ್ಲಿ ಕತ್ತಿ, ರೋಬೋ 2, ದರ್ಬಾರ್ ಹಾಗೂ ತೆಲುಗಿನಲ್ಲಿ ಕೈದಿ ನಂಬರ್ 150ಯಂತಹ ಸಿನಿಮಾಗಳನ್ನು ನಿರ್ಮಿಸಿರುವ ಹೆಸರಾಂತ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ 22ನೇ ಸಿನಿಮಾದಲ್ಲಿ ಆಶಿಕಾ ಚಾನ್ಸ್ ಪಡೆದಿದ್ದಾರೆ.