ಆಷಾಢ ಮಾಸ: ಚಾಮುಂಡಿ ಬೆಟ್ಟದ ಮೆಟ್ಟಲು, ಗೋಪುರಗಳಿಗೆ ಬಣ್ಣ-ಸುಣ್ಣ

ಮೈಸೂರು,ಜುಲೈ,13,2026 (www.justkannada.in):  ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸ್ವಚ್ಛ ಹಾಗೂ ಸುಂದರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಚಾಮುಂಡಿ ಬೆಟ್ಟದ ಮೆಟ್ಟಲುಗಳು ಮತ್ತು ಗೋಪುರಗಳಿಗೆ ಬಣ್ಣ ಹಾಗೂ ಸುಣ್ಣ ಬಳಿಯುವ ಕಾರ್ಯ ಕೈಗೊಳ್ಳಲಾಗಿದೆ.

ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್‌ ನ ಯುವಕರು ಕಳೆದ ಆರು ವರ್ಷಗಳಿಂದ ನಿರಂತರವಾಗಿ ಈ ಸೇವಾ ಕಾರ್ಯವನ್ನು ನಡೆಸುತ್ತಿದ್ದು, ಈ ಬಾರಿಯೂ ಮೆಟ್ಟಲುಗಳು ಹಾಗೂ ಗೋಪುರಗಳನ್ನು ಸ್ವಚ್ಛಗೊಳಿಸಿ ಬಣ್ಣ-ಸುಣ್ಣ ಬಳಿದು ಆಕರ್ಷಕವಾಗಿ ಸಜ್ಜುಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಯದುನಂದನ್ ಜಿ, ಆಷಾಢ ಮಾಸದಲ್ಲಿ ಸಾವಿರಾರು ಭಕ್ತರು ಹರಕೆ ತೀರಿಸಲು ಮೆಟ್ಟಲುಗಳ ಮೂಲಕ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ. ಭಕ್ತಾದಿಗಳು ಬೆಟ್ಟದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಸ್ನೇಹಿತರೆಲ್ಲರೂ ಸೇರಿ ತಾಯಿ ಚಾಮುಂಡೇಶ್ವರಿ ಸೇವೆ ಮಾಡುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವ ನಾಯಕ್, ಕೃಷ್ಣ, ವೆಂಕಟೇಶ್, ಪಾಪಣ್ಣ, ಧನು, ಮಾದೇಶ್, ವೀರು, ಗಣೇಶ್, ಆಟೋ ಸ್ವಾಮಿ, ನಾಗೇಶ್ ಎಂ.ಆರ್. ಸೇರಿದಂತೆ ಹಲವರು ಭಾಗವಹಿಸಿದ್ದರು.

Key words: AshadaMasa, Mysore, Chamundi hill, steps, painted