ನವದೆಹಲಿ,ಡಿಸೆಂಬರ್,1,2025 (www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಯಾರೇ ಸಿಎಂ ಆದರೂ ರಾಜ್ಯಕ್ಕೆ ಒಳ್ಳೆಯದು ಆಗಲ್ಲ ಎಂದು ವಿಧಾನ ಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅರವಿಂದ ಬೆಲ್ಲದ್, ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ ಭ್ರಷ್ಟಾಚಾರ ಹೆಚ್ಚಾಗಿದೆ. ಸಿಎಂ ಯಾರಾಗಬೇಕೆಂಬುದು ಅವರ ಪಕ್ಷದ ತೀರ್ಮಾನ. ಸಿಎಂ ಬದಲಾವಣೆ ನಿಶ್ಚಿತ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಸಿಎಂ ಸ್ಥಾನಕ್ಕೆ ಸ್ಪರ್ಧೆ ಇದೆ. ಅಹಿಂದ ನಾಯಕ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಕುರುಬ ನಾಯಕರು ಅಂದರೆ ಒಪ್ಪಿಕೊಳ್ಳಬಹುದು ಅಹಿಂದಾದಲ್ಲಿ ಈಡಿಗ ಮಡಿವಾಳ ಸವಿತಾ ಸಮಾಜ, ಕುಂಬಾರ, ಕಂಬಾರ ಸೇರಿ ಹಲವು ಸಮುದಾಯಗಳಿವೆ. ಈ ಸಮುದಾಯದವರು ಸಿದ್ದರಾಮಯ್ಯರನ್ನು ಎಲ್ಲಿ ಒಪ್ಪಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹೈಕಮಾಂಡ್ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ತೀರ್ಮನವಾಗಿಲ್ಲ ರಾಜ್ಯದ ಜನರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಕಾಂಗ್ರೆಸ್ ಶಾಸಕರಿಗೂ ವಿಶ್ವಾಸವಿಲ್ಲ. ಅದಕ್ಕಾಗಿ ಪದೇ ಪದೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಾರೆ ಎಂದು ಅರವಿಂದ ಬೆಲ್ಲದ್ ತಿಳಿಸಿದರು.
Key words: becomes, CM, Congress, not be good, state, Arvind Bellad







