ಆಗಸ್ಟ್ 2 ರಿಂದ 7ರವರೆಗೂ ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ‘ ರವಿ ಕಾಣದನ್ನ ಕಲಾವಿದ ಕಂಡ ‘…

 

ಬೆಂಗಳೂರು, ಆ.03, 2019 : (www.justkannada.in news) ಡೇರಾ ಆರ್ಟ್ ಸ್ಟುಡಿಯೋ ಪ್ರಸ್ತುತ ಪಡೆಸುತ್ತಿರುವ ಸಿಟಿ ಲೈಟ್ಸ್ ಎಂಬ ಶಿರ್ಷಿಕೆಯಡಿಯಲ್ಲಿ ಚಿತ್ರಕಲೆಗಳ ಪ್ರದರ್ಶನ ಆಯೋಜಿಸಲಾಗಿದೆ. ಚಿತ್ರಗಾರ ಎಸ್. ಏ ವಿಮಲನಾಥನ್ ಅವರ ಕುಂಚದಲ್ಲಿ ಅರಳಿದ ಈ ಕಲೆಗಳು ಆಗಸ್ಟ್ 2 ರಿಂದ 7ರವರೆಗೂ ನಗರದ ಚಿತ್ರಕಲಾ ಪರಿಷತ್‍ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಪ್ರದರ್ಶನದಲ್ಲಿ ಸಂದೇಶ ಸಾರುವ ಚಿತ್ರಗಳು ಕಾಣಬಹುದಾಗಿದೆ. 50ಕ್ಕೂ ಹೆಚ್ಚು ವರ್ಣಚಿತ್ರಗಳು ಪ್ರದರ್ಶನದಲ್ಲಿ ಇಡಲಾಗಿದೆ. ಒಂದೊಂದು ಚಿತ್ರ ಒಂದೂಂದು ಸಂದೇಶ ಸಾರುತ್ತದೆ. ಅದರಲ್ಲೂ ಪ್ರಮುಖವಾಗಿ ಅಧುನಿಕರಣವನ್ನ ದೂರದೆ ನಗರಗಳ ಬೆಳವಣೆಗೆ ಯಾವ ಹಂತಕ್ಕೆ ತಲುಪಿದೆ ಎಂಬುದು ಕಲಾವಿದರು ಅಚ್ಚುಕಟ್ಟಾಗಿ ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಒಂದೆಡೆ ಬೆಳೆಯುತ್ತಿರುವ ನಗರಗಳು, ಆಕಾಶಕ್ಕೆ ಮುತ್ತಿಡುವ ಬಿಲ್ಡಿಂಗ್‍ಗಳು, ಮತ್ತೊಂದೆಡೆ ದೊಡ್ಡ ದೊಡ್ಡ ರೆಸ್ಟೋರೆಂಟ್‍ಗಳು ಇವುಗಳ ನಡುವೆ ಆರೋಗ್ಯ ನೀಡುವ ಹಸಿರು ಮಾತ್ರ ಕಾಣೆಯಾಗುತ್ತಿದೆ. ಹಸಿರು ನಿಧಾನಕ್ಕೆ ಹಿಂದೆ ವಾಲುತ್ತಿದ್ದರೆ, ಸಿಲಿಕಾನ್ ಸಿಟಿಗಳು ಕಲರ್ ಫುಲ್ ಆಗಿದೆ ಎಂದು ಕಲಾವಿದರು ವ್ಯಂಗ್ಯವಾಗಿ ತಿಳಿಸಿದ್ದಾರೆ.

ಮಹಿಳೆಯರ ವಿವಿಧ ಭಂಗಿಯ ಚಿತ್ರಗಳು ಮಹಿಳೆ ಅಬಲೆ ಅಲ್ಲ ಸಬಲೆ ಎಂಬ ಸಂದೇಶ ಸಾರುತ್ತವÉ. ಮಹಿಳೆ ದೇವತೆಯ ಸ್ವರೂಪ, ಒಬ್ಬ ಮಹಿಳೆಯನ್ನ ವಿವಿಧ ಅವತಾರಗಳಲ್ಲಿ ಕಾಣಬಹುದು. ಹಾಗಾಗಿ ದೇವತೆಗಳ ವಾಹನಗಳನ್ನ (ಪ್ರಾಣಿ, ಪಕ್ಷಿಗಳು) ಸಮಾಕಾಲಿನ ಮಹಿಳೆಯರ ಚಿತ್ರಗಳ ಜೊತೆ ಬಿಡಿಸಿ, ಮಹಿಳೆಯರ ಶಕ್ತಿಯನ್ನ ತಿಳಿಸುವುದರ ಜೊತೆಗೆ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

ಅಲ್ಲದೆ ಇಡಿ ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರಿದ ಬುದ್ಧನ ಚಿತ್ರ, ಚಿತ್ರಕಲಾ ಪರಿಷತ್‍ನ ಮತ್ತೊಷ್ಟು ಶಾಂತಿಯತ್ತ ಕರೆದೊಯ್ಯುತ್ತದೆ. ಸಿಟಿ ಎಷ್ಟೇ ಬೆಳೆದ್ರು, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರು ಕಡೆಗೆ ಒಂದು ದಿನ ಶಾಂತಿ ಎನ್ನುವುದು ಬೇಕು. ಹಾಗಾಗಿ ಎಲ್ಲದಕ್ಕೂ ಮೀರಿದ್ದು ನೆಮ್ಮದಿ, ಆ ನೆಮ್ಮದಿ ಸಿಗಬೇಕಾದ್ರೆ ಮನಸ್ಸಿನಲ್ಲಿ ಶಾಂತಿ ನೆಲಸಬೇಕು. ಇದರ ಸಂಕೇತವಾಗಿ ಬುದ್ಧನ ಚಿತ್ರಗಳನ್ನ ಕಲಾವಿದರು ಪ್ರಸ್ತುತ ಪಡೆಸಿದ್ದಾರೆ.

ಮನುಷ್ಯ ಸಂಘ ಜೀವಿ. ಆ ಸಂಘ ಜೀವಿಗೆ ಪರಿಸರದಿಂದ ಸಿಗಬೇಕಾದ ಗಾಳಿ, ನೀರು, ಬೆಳಕಿನ ಮಹತ್ವವನ್ನ ಅತೀ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಈ ಪ್ರಕೃತಿಯನ್ನ ಮಾನವ ದಿನದಿಂದ ದಿನಕ್ಕೆ ಅಳವಿನ ಅಂಚಿಗೆ ತಳ್ಳಿದ್ದಾನೆ, ಆ ಪ್ರಕೃತಿಯನ್ನು ಉಳಿಸುವ ಶಕ್ತಿಯೊಂದಿದೆ ಎಂದು ಕಲಾವಿದರು ತಮ್ಮ ಕಲೆಯಲ್ಲಿ ತಿಳಿಸಿದ್ದಾರೆ. ಆ ಶಕ್ತಿಯೇ ಯಕ್ಷ, ಯಕ್ಷಿ. ಯಕ್ಷ, ಯಕ್ಷಿ ಎಂದರೆ ಪ್ರಕೃತಿಯನ್ನ ಕಾಪಾಡುವು ದೇವರು. ಆ ದೇವರು ಕೂಡ ಕಲಾವಿದನ ಕುಂಚದಲ್ಲಿ ಅರಳಿದೆ. ಇದರಿಂದ ಮನಷ್ಯ ಇಂದು ಪರಿಸರ ರಕ್ಷಣೆ ಮಾಡುವ ಬದಲು ಬಿಲ್ಡಿಂಗ್‍ಗಳ ರಕ್ಷಣೆಗೆ, ಮುಂದಾಗಿದ್ದಾನೆ ಎಂದು ಸಂದೇಶ ನೀಡಲಾಗಿದೆ.

ಈ ಪ್ರದರ್ಶನದ ಉದ್ಘಾಟನೆಯನ್ನ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್ ಶಂಕರ್ ನೇರವೆರಿಸಿದರು. ಮುಖ್ಯ ಅತಿಥಿಗಳಾಗಿ ಕಮಾಲ್ ಕಪೂರ್ ವ್ಯವಸ್ಥಾಪಕ ನಿರ್ದೇಶಕರು ರೆಕ್ಸ್ ಥೇಟರ್ ಬೆಂಗಳೂರು ಹಾಗೂ ಸುನೀಲ್ ಫರ್ನಾಂಡೀಸ್ ಪ್ರಾಂಶುಪಾಲರು ಸೆಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಬೆಂಗಳೂರು, ಸುಭಾಷಿಶ್ ಮಂಡಲ್ ಡಿಜೈನ್ ನಿರ್ದೇಶಕ ಜನ್ಸಲರ್ ಭಾಗವಹಿಸಿದ್ದರು.

ಎಸ್.ಏ ವಿಮಲನಾಥನ್ ಬೆಳದು ಬಂದ ಹಾದಿ

ಎಸ್.ಏ ವಿಮಲನಾಥನ್ ಮೂಲತಃ ಬೆಂಗಳೂರಿನವರು. ತಮ್ಮ ವಿಧ್ಯಾಭ್ಯಾಸವನ್ನ ದುಬೈನಲ್ಲಿ ಮುಗಿಸಿದ್ದಾರೆ. ತಮ್ಮ ವಿಧ್ಯಾಭ್ಯಾಸದ ಅವದಿಯಲ್ಲಿ ಸಾಕಷ್ಟು ಕಷ್ಟಗಳನ್ನ ನೋಡಿದ್ದಾರೆ. ಅವರು ಕಲಾ ವಿದ್ಯಾರ್ಥಿಯಾಗಿದ್ದಾಗ ಜೀವನ ಸಂಕಷ್ಟದಿಂದ ಕೂಡಿತ್ತು. ಇದೆ ಅವದಿಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‍ನ ಕಾಲೇಜ್ ಆಫ್ ಫೈನ್ ಆಟ್ರ್ಸ್‍ನಲ್ಲಿ ಬಿಎಫ್‍ಏ ಪದವಿಯನ್ನ ಮುಗಿಸಿದ್ದಾರೆ. 2007ರಲ್ಲಿ ಕಲಾ ಕ್ಷೇತ್ರದಲ್ಲಿ ಮತ್ತಷ್ಟು ಆಸಕ್ತಿ ಹೆಚ್ಚಾಯಿತು. ಹಾಗಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೃಶ್ಯ ಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪದವಿಯಲ್ಲಿ ಒಂದನೇ ಶ್ರೇಯಾಂಕದಲ್ಲಿ ಉತ್ತೀರ್ಣಗೊಂಡರು, ಚಿನ್ನದ ಪದಕ ಪಡೆದರು. ಆ ಮೂಲಕ ಬೆಂಗಳೂರಿನ ಸಮಕಾಲೀನ ಕಲಾಕ್ಷೇತ್ರದಲ್ಲಿ ಚಾಪು ಮೂಡಿಸಲು ಮುಂದಾದರು. ಇವರಿಗೆ ಕರ್ನಾಟಕ ಲಲಿತ ಕಲಾ ಆಕಾಡೆಮೆ ಪ್ರಶಸ್ತಿ, ಕಾಂಲಿನ್ ಆರ್ಟ್ ಫೌಂಡೇಶನ್ ದಕ್ಷಿಣ ವಿಭಾಗದ ಪ್ರಶಸ್ತಿ, ಅಯ್ಯ ಆರ್ಟ್ ಗ್ಯಾಲರಿ ಚೆನೈ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರು ಮೂಡಿಗೇರಿವೆ.

 

key words : arts-exhibition-bangalore-chitra.kala.parishath