ಕಲಾವಿದ ಜೆ.ಎಂ.ಎಸ್.‌ ಮಣಿ ನಿಧನ: ಸಂತಾಪ ಸೂಚಿಸಿದ ಟಿ.ಎಸ್ ನಾಗಾಭರಣ.

ಬೆಂಗಳೂರು,ಜೂನ್,3,2021(www.justkannada.in):  ಕೆನ್ ಕಲಾಶಾಲೆ ಮೂಲಕ ನೂರಾರು ಕಲಾವಿದರನ್ನು ಸೃಜಿಸಿದ ಹಿರಿಯ ಕಲಾಚೇತನ ಶಿಕ್ಷಕ ಜೆ.ಎಂ.ಎಸ್.‌ ಮಣಿಯವರು ನಿಧನರಾಗಿದ್ದು, ಅವರಿಗೆ ಭಾವಪೂರ್ಣ ನಮನಗಳು ಎಂದು ರಂಗಕರ್ಮಿ,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.Kannada campaign-kannada kayaka varsha-Kannada Development Authority-TS Nagabarana

ದೇಶ-ವಿದೇಶಗಳಲ್ಲಿ ದೇಶದ ರಾಜ್ಯದ ಪ್ರತಿನಿಧಿಯಾಗಿ ಕಲಾಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದ್ದ ಮಣಿಯವರು ಅವರ ಕಲಾಕೃತಿಗಳ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಟಿ.ಎಸ್ ನಾಗಾಭರಣ ಸ್ಮರಿಸಿದ್ದಾರೆ.

ಕರುನಾಡಿನ ಕಲಾ ಕಣ್ಮಣಿ ಜೆ.ಎಂ.ಎಸ್.‌ ಮಣಿಯವರು, ಅತ್ಯಂತ ತಾಳ್ಮೆ-ಸಹನೆಯಿಂದ ಮಕ್ಕಳಿಗೆ ಕಲಾರಂಗದ ಬಗ್ಗೆ ತಿಳಿಸಿ ಕೊಡುತ್ತಿದ್ದರು. ಇಂತಹ ವೃದ್ಧರಿಗೆ ಸಹನಾಮಯಿ ಮಣಿಯವರು ಇಂದು ನಮ್ಮನ್ನಗಲಿರುವುದು ನೋವಿನ ಸಂಗತಿ. ಅವರಿಗೆ ಸದ್ಗತಿ ದೊರೆಯಲಿ. ಭಾವಪೂರ್ಣ ನಮನಗಳು ಎಂದು ಟಿ.ಎಸ್ ನಾಗಾಭರಣ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Key words: Artist- J.M.S. Mani- died- Kannada Development Authority-president-TS Nagabarana- Condolences