ಆಸ್ಪತ್ರೆಯಲ್ಲಿ ಮಗುವನ್ನ ಕದ್ದು ಮಾರಾಟ ಮಾಡಿದ್ಧ ಮಹಿಳೆ ಸೇರಿ ಇಬ್ಬರು ಅಂದರ್…

ಬೆಂಗಳೂರು, ನವೆಂಬರ್,20,2020(www.justkannada.in):  ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕದ್ದು ಬೇರೆಡೆ ಮಾರಾಟ ಮಾಡಿದ್ದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನ ವಿ.ವಿ ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.kannada-journalist-media-fourth-estate-under-loss

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ರಶೀದ್ ಮತ್ತು ಆರ್ಶಿಯಾ ದಂಪತಿಗೆ ಸೇರಿದ್ದ ಮಗುವನ್ನ ಮಹಿಳೆ ಕಳ್ಳತನ ಮಾಡಿ ಕುಮಾರಸ್ವಾಮಿ ಲೇಔಟ್ ನಲ್ಲಿ ಮಾರಾಟ ಮಾಡಿದ್ದಳು. ನವೆಂಬರ್ 9 ರಂದು ಅನಾರೋಗ್ಯದಿಂದಾಗಿ ಮಗುವಿಗೆ ಎನ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ 11 ರಂದು ಮಗುವನ ಆರೋಗ್ಯ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಮಗುವನ್ನ ಪಡೆದುಕೊಳ್ಳುವಂತೆ ಆಸ್ಪತ್ರೆಯಲ್ಲಿ ಅನೌನ್ಸ್ ಮಾಡಲಾಗಿತ್ತು. Arrested - woman –kidnap-sold - newborn baby –bangalore- hospital

ಈ ವೇಳೆ ಆರೋಪಿ ಮಹಿಳೆ ಮಗುವನ್ನ ತಾಯಿಗೆ ನೀಡುವುದಾಗಿ ಹೇಳಿ ಮಗುವನ್ನ ಕಿಡ್ನಾಪ್ ಮಾಡಿ ಕುಮಾರಸ್ವಾಮಿ ಲೇಔಟ್ ನಲ್ಲಿ 80 ಸಾವಿರ ರೂಗೆ ಮಾರಾಟ ಮಾಡಿದ್ದಳು ಎನ್ನಲಾಗಿದೆ. ಇದೀಗ ಮಗು ಕಳ್ಳತನ ಪ್ರಕರಣ ಸುಖಾಂತ್ಯವಾಗಿದ್ದು, ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನ ವಿ.ವಿ ಪುರಂ ಠಾಣಾ ಪೊಲೀಸರು ಬಂಧಿಸಿ ಮಗುವನ್ನ ತಾಯಿಗೆ ಒಪ್ಪಿಸಿದ್ದಾರೆ.

Key words:  Arrested – woman –kidnap-sold – newborn baby –bangalore- hospital