ಕಾಡು ಹಂದಿ ಬೇಟೆಯಾಡಿದ್ದ ಇಬ್ಬರು ಅರೆಸ್ಟ್: ಬಂದೂಕು, ಬೈಕ್ ವಶ…

0
500

ಕೊಡಗು,ಸೆ,24,2019(www.justkannada.in): ಕಾಡು ಹಂದಿ ಬೇಟೆಯಾಡಿದ್ದ ಇಬ್ಬರು ವ್ಯಕ್ತಿಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯಲ್ಲಿ  ಈ ಘಟನೆ ನಡೆದಿದೆ.  ಸೂರ್ಲಬ್ಬಿ ಗಣೇಶ್, ಕುಂಬಾರಗಡಿಗೆ ಸುಬ್ರಮಣಿ ಬಂಧಿತ ಆರೋಪಿಗಳು. ಬಂಧಿತ ಇಬ್ಬರು ಕಾಡುಹಂದಿ ಬೇಟೆಯಾಡಿ ಸಾಗಿಸುವಾಗ  ಅರಣ್ಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಕಾಡುಹಂದಿಯ ಮಾಂಸ, ಎರಡು ಬಂದೂಕು,ಕತ್ತಿ, ಒಂದು ಬೈಕ್  ಅನ್ನ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: Arrest- two -hunted -wild boar-kodagu