ಶ್ರೀಗಂಧ ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸಿದ್ದ ಆರೋಪಿ ಅಂದರ್…

ಚಾಮರಾಜನಗರ,ಸೆಪ್ಟಂಬರ್,17,2020(www.justkannada.in): ಶ್ರೀಗಂಧ ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು  ಬಂಧಿಸಿದ್ದಾರೆ.arrest-accused-sandalwood-tree-forest-department-malemahadeshwara

ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಶ್ರೀಗಂಧ ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸಿದ್ದ ಹನೂರು ತಾಲೂಕಿನ ಕೆ.ಕೆ.ಡ್ಯಾಂ ಗ್ರಾಮದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಮೂವರು ಆರೋಪಿಗಳ ಪೈಕಿ ಒಬ್ಬನನ್ನ ಬಂಧಿಸಿದ್ದು, ಉಳಿದವರಿಗಾಗಿ ಅರಣ್ಯ ಸಿಬ್ಬಂದಿಗಳು ಬಲೆ ಬೀಸಿದ್ದಾರೆ.arrest-accused-sandalwood-tree-forest-department-malemahadeshwara

ಬಂಧಿತ ಆರೋಪಿ ಹನೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಶ್ರೀಗಂಧದ ಕಡಿದು ಮಾರಾಟ ಮಾಡುತ್ತಿದ್ದ. ಪಿ.ಜಿ.ಪಾಳ್ಯ ವಲಯದ ಅರಣ್ಯ ಪ್ರದೇಶದ ಮಾರ್ಗವಾಗಿ ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ಬಲೆಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.  ಬಂಧಿತನಿಂದ 16 ಕೆ.ಜಿ. ಶ್ರೀಗಂಧದ ತುಂಡುಗಳು,ಚಕ್ಕೆಗಳನ್ನು ವಶಕ್ಕೆ ಪಡೆಯಲಾಗಿದೆ.

Key words: Arrest- accused – sandalwood tree- forest-department-malemahadeshwara