ದ್ವೇಷದ ಮಾತುಗಳನ್ನಾಡಿದ ಕಾಂಗ್ರೆಸ್ ಶಾಸಕನನ್ನು ಬಂಧಿಸಿ- ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹ

ಶಿವಮೊಗ್ಗ,ಜನವರಿ,3,2026 (www.justkannada.in): ಕಾಂಗ್ರೆಸ್ ಸರ್ಕಾರವೇ ದ್ವೇಷ ಭಾಷಣ ಕಾಯ್ದೆಯನ್ನ ಜಾರಿ ಮಾಡುತ್ತಿದೆ. ಈಗ ದ್ವೇಷ ಮಾತುಗಳನ್ನಾಡಿರುವ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿಯನ್ನ ಬಂಧಿಸಿ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ವಿಚಾರಕ್ಕೆ ನಡೆದ ಗಲಾಟೆ , ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಅರಗ ಜ್ಞಾನೇಂದ್ರ, ಶಾಸಕ ಭರತ್ ರೆಡ್ಡಿ ಪ್ರಚೋಧನಾಕಾರಿ ಹೇಳಿಕೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆಯನ್ನ ನಿಮಿಷದಲ್ಲಿ ಸುಡುತ್ತೇವೆ ಎಂದಿದ್ದಾರೆ.  ದ್ವೇಷದ ಹೇಳಿಕೆ ನೀಡಿರುವ ಭರತ್ ರೆಡ್ಡಿಯನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.

ದ್ವೇಷ ಭಾಷಣದ ಬಗ್ಗೆ ಕಾಂಗ್ರೆಸ್ ಸರ್ಕಾರ ಕಾಯ್ದೆ ಜಾರಿ ಮಾಡಿದೆ ಅದರೆ ಅವರದ್ದೇ ಪಕ್ಷದ ಶಾಸಕರು ದ್ವೇಷದ ಮಾತುಗಳನ್ನಾಡಿದ್ದಾರೆ.  ಈ ಬಗ್ಗೆ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ನೋಡಬೇಕು ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

Key words: Arrest, Congress MLA, hate speech, Araga Gnanendra