ಅಪ್ಪು ಬರ್ತ್ ಡೇ ದಿನ (ಮಾರ್ಚ್ 17 ) ಜೇಮ್ಸ್ ರಿಲೀಸ್ ಸಾಧ್ಯತೆ

ಬೆಂಗಳೂರು, ನವೆಂಬರ್ 1, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ದಿನ ಮಾರ್ಚ್ 17 ರಂದು ‘ಜೇಮ್ಸ್’ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ‘ಜೇಮ್ಸ್’ ಕೊಡುಗೆಯಾಗಿ ನೀಡಲು ಚಿತ್ರತಂಡ ಚಿಂತನೆ ನಡೆಸಿದೆ.

ಪುನೀತ್ ರಾಜಕುಮಾರ್ ಅಭಿನಯದ, ಚೇತನ್ ಕುಮಾರ್ ನಿರ್ದೇಶನದ ಭಾರಿ ನಿರೀಕ್ಷೆಯ ‘ಜೇಮ್ಸ್’ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದಿಷ್ಟು ಚಿತ್ರೀಕರಣ ಬಾಕಿ ಉಳಿದಿದೆ ಎನ್ನಲಾಗಿದೆ.

‘ಜೇಮ್ಸ್’ ಚಿತ್ರದ ಡಬ್ಬಿಂಗ್ ವಿಚಾರವಾಗಿ ಶಿವಣ್ಣ ಅವರನ್ನು ಕೇಳಿಕೊಳ್ಳಲಾಗುವುದು. ಅಪ್ಪು ಅವರಿಗೆ ಧ್ವನಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಲಾಗಿದೆ.