ಮೈಸೂರು,ನವೆಂಬರ್,10,2022(www.justkannada.in): ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರದಿಂದ ಪೊಲೀಸ್ ಇಲಾಖೆಗೆ ಬೇಕಾದ ಮೂಲಸೌಕರ್ಯ ಒದಗಿಸಿದ್ದೇವೆ. ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ನುಡಿದರು.![]()
ಮೈಸೂರಿನಲ್ಲಿ ನೂತನ ಪೋಲಿಸ್ ಠಾಣೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್, 200ಕೋಟಿ ವೆಚ್ಚದಲ್ಲಿ 215 ಪೊಲೀಸ್ ಠಾಣೆಗಳನ್ನ ನಿರ್ಮಿಸಿದ್ದೇವೆ. ವ್ಯಪನ್ ಕೊಟ್ಟಿದ್ದೇವೆ. ಹಿಂದೆ ಇದ್ದ ಸರ್ಕಾರದಲ್ಲಿ ಶೇ. 37% ಖಾಲಿ ಹುದ್ದೆಗಳಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಕೇವಲ 12ಸಾವಿರ ಹುದ್ದೆ ಖಾಲಿ ಇದೆ. ನಾವು ಬಂದ ಮೇಲೆ 5 ಸಾವಿರ ಕಾನ್ಸ್ ಟೇಬಲ್ ಗಳ ನೇಮಕ ಮಾಡಿದ್ದೇವೆ ಎಂದರು.
ಹರಿಯಾಣದಲ್ಲಿ ನಡೆದ ಕಾನ್ಫಿರೆನ್ಸ್ ನಲ್ಲಿ ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿಯ ಆನ್ಲೈನ್ ಪೋಲೀಸ್ ಎಫ್ ಐ ಆರ್ ದಾಖಲು ವ್ಯವಸ್ಥೆ, ಇನ್ವೆಸ್ಟಿಗೆಷನ್ ವಿಧಾನ, 112 ಹೆಲ್ಪ್ ಲೈನ್ ವ್ಯವಸ್ಥೆ ಎಲ್ಲಾ ಉತ್ತಮವಾಗಿದೆ. 112ನಲ್ಲಿ ಕರೆ ಮಾಡಿದ 9 ನಿಮಿಷದಲ್ಲಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ. ಇದೀಗ ಸೈಬರ್ ವಿಭಾಗವನ್ನು ಬಲ ಪಡಿಸಲಾಗಿದೆ. ಮೈಸೂರು ಪ್ರವಾಸಿತಾಣವಾಗಿರುವ ಕಾರಣ ಇಲ್ಲಿ ಕಾನೂನು ವ್ಯವಸ್ಥೆಗೆ ಹೆಚ್ಚು ಗಮನ ವಹಿಸಲಾಗಿದೆ ಎಂದು ತಿಳಿಸಿದರು.
ಪಿಎಸ್ ಐ ಅಕ್ರಮ ನೇಮಕಾತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಕರಣ ಕುರಿತು ಸಿಐಡಿ ನಡೆಸುತ್ತಿರುವ ತನಿಖೆ ಪ್ರಗತಿಯಲ್ಲಿದೆ. ಪಾರದರ್ಶಕವಾಗಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ 106 ಮಂದಿ ಕಸ್ಟಡಿನಲ್ಲಿದ್ದಾರೆ ಎಂದರು.
ಪ್ರಾಮಾಣಿಕರಿಗೆ ಅನ್ಯಾಯವಾಗಿರುವ ವಿಚಾರ, ಪ್ರಕರಣ ನ್ಯಾಯಾಲಯದಲ್ಲಿದೆ . ಈ ಹಿನ್ನೆಲೆ ಈ ಬಗ್ಗೆ ನಾನೇನು ಹೇಳಲಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Key words: Appreciation – national -level – Karnataka Police – Home Minister -Araga jnanendra.







