ಮುಡಾ ಬಜೆಟ್ ಗೆ ಶ್ಲಾಘನೆ: ಮೈಸೂರು-ಮಡಿಕೇರಿ ಮುಖ್ಯ ರಸ್ತೆಗೆ ರಾಷ್ಟ್ರಕವಿ ಕುವೆಂಪು ಹೆಸರಿಡುವಂತೆ ಶಾಸಕ ಜಿಟಿಡಿ ಸಲಹೆ….

ಮೈಸೂರು,ಮಾರ್ಚ್,20,2021(www.justkannada.in): ಮೈಸೂರು-ಮಡಿಕೇರಿ ಮುಖ್ಯ ರಸ್ತೆಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನಿಡುವಂತೆ ಶಾಸಕ ಜಿ.ಟಿ ದೇವೇಗೌಡರು ಸಲಹೆ ನೀಡಿದರು.jk

ಇಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ  ಬಜೆಟ್ ಅನ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಮುಡಾ ಆಯುಕ್ತ ನಟೇಶ್ ಮಂಡನೆ ಮಾಡಿದರು.  ಬಜೆಟ್ ಕುರಿತು ಮೂರು ಪಕ್ಷದ ಎಂ.ಎಲ್.ಎ ಹಾಗೂ ಎಂಎಲ್ ಸಿ ಗಳು ಚರ್ಚೆ ನಡೆಸಿದರು.

ನಂಜನಗೂಡು ಉದ್ಯಾನದ ಅಭಿವೃದ್ಧಿ ಒತ್ತು ನೀಡುವಂತೆ ಶಾಸಕ ಹರ್ಷವರ್ಧನ್ ಧ್ವನಿ ಎತ್ತಿದರೇ ಶ್ರೀರಂಗಪಟ್ಟಣಕ್ಕೆ ನೀಡಿರುವ ಅನುದಾನ ಕುರಿತು ಶಾಸಕ ರವೀಂದ್ರ ಶ್ರೀಕಂಠಯ್ಯ  ಗರಂ ಆದರು. ಇನ್ನು ಮುಡಾ ಬಜೆಟ್ ಗೆ ಶಾಸಕ ಎಲ್.ನಾಗೇಂದ್ರ ಶಾಸಕ ಜಿಟಿ ದೇವೇಗೌಡ, ಎಂಎಲ್ ಸಿ ಗಳಾದ ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಶ್ಲಾಘನೆ ವ್ಯಕ್ತಪಡಿಸಿದರು.

ಬಜೆಟ್ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಶಾಸಕ ಜಿಟಿ ದೇವೇಗೌಡ, ದೂರ ದೃಷ್ಟಿಯಿಟ್ಟು ಬಜೆಟ್ ನೀಡಿದ್ದೀರಿ. ಇದು ಒಂದು ಆಶಾದಾಯಕವಾದ ಬಜೆಟ್ ನೀಡಿದ್ದೀರಿ. ಕಳೆದ ಬಜೆಟ್ ನಲ್ಲಿ 50ಕೋಟಿ ರೂ ಹಣ ಉಂಡುವಾಡಿ ಕುಡಿಯುವ ನೀರಿನ ಯೋಜನೆಗೆ ನೀಡಿದ್ದೀರಿ, ಈ ಬಜೆಟ್ ನಲ್ಲಿ 25ಕೋಟಿ ಅನುದಾನ ನೀಡಿದ್ದೀರಿ, ಕುಡಿಯುವ ನೀರಿನ ಯೋಜನೆಗೆ ಅನುಧಾನ ನೀಡಿರುವುದು ಸರಿ. ಶ್ರೀರಂಗಪಟ್ಟಣ, ನಂಜನಗೂಡು ವರುಣ ಸೇರಿದಂತೆ ಮುಡಾ ವ್ಯಾಪ್ತಿಗೆ ಬರುವ ಕ್ಷೇತ್ರಗಳಿಗೂ ಅನುಧಾನ ನೀಡದಿದ್ದರೆ ಇನ್ನು ಮುಂದಾದರೂ ನೀಡಿ ಎಂದು ತಿಳಿಸಿದರು.Appreciation - Muda Budget-Mysore-Madikeri- Main Road-kuvempu name-GT Devegowda

ಇನ್ನು ಮೈಸೂರು-ಮಡಿಕೇರಿ ಮುಖ್ಯ ರಸ್ತೆಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನಿಡುವಂತೆ ಶಾಸಕ ಜಿ.ಟಿ ದೇವೇಗೌಡರು ಸಲಹೆ ನೀಡಿದರು. ಇದೇ ವೇಳೆ ಮೈಸೂರಿನ ಕುವೆಂಪು ಅವರ ನಿವಾಸವನ್ನ ಸ್ಮಾರಕವನ್ನಾಗಿಸಿ ಎಂದು ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಲಹೆ ಕೊಟ್ಟರು.

Key words: Appreciation – Muda Budget-Mysore-Madikeri- Main Road-kuvempu name-GT Devegowda