VTU ಕುಲಪತಿ ನೇಮಕ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್.

ಬೆಂಗಳೂರು,ನವೆಂಬರ್,3,2023(www.justkannada.in): ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ (VTU) ಬೆಳಗಾವಿ  ಇಲ್ಲಿನ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅವರ ನೇಮಕಾತಿಯನ್ನು   ರದ್ದುಗೊಳಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಮೈಸೂರು ವಿವಿಯ ಹಾಲಿ ಪಿಎಂಇ ಬೋರ್ಡ್ ಸದಸ್ಯರಾದ ಡಾ.ಕೆ.ಮಹದೇವ್ ಸಲ್ಲಿಸಿದ್ದ ರಿಟ್ ಅರ್ಜಿ W.P 21681/2022 ಮತ್ತು ಮೈಸೂರು ವಿವಿಯ ಮಾಜಿ ಕುಲಪತಿ( ಪ್ರಭಾರ) ಪ್ರೊ.ಶಿವರಾಜ್ ರವರು ಸಲ್ಲಿಸಿದ್ದ  W.P 23349/2022  ಪಿಐಎಲ್ ಗಳಲ್ಲಿ ಮುಖ್ಯ ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್   ಅವರ ಪೀಠ ದಿ:02.11.2023ರಂದು ಅರ್ಜಿದಾರ  ಮತ್ತು ಪ್ರತಿವಾದಿಗಳ ಕಡೆಯಿಂದ ಮಂಡಿಸಲಾದ ಸುಮಾರು ಎರಡು ತಾಸಿಗೂ ಹೆಚ್ಚು ಅವಧಿಯ ವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿ ಆದೇಶಿಸಿದೆ.

VTU ಕುಲಪತಿಯಾಗಿರುವ ಡಾ.ಎಸ್.ವಿದ್ಯಾಶಂಕರ್ ಅವರಿಗೆ ಸದರಿ ಹುದ್ದೆಗೆ ಅವಶ್ಯವಿರುವ Academic Excellency ಇಲ್ಲದಿರುವುದು, ಅವರ ನೇಮಕಾತಿಯು UGC Regulation on Minimum Qualification for Appointment of Teachers  & Other Academic Staff  in Universities & Colleges and Measures for Maintenance of Standards in Higher Education -2018 ,  ದಿ:18.07.2018 ಉಲ್ಲಂಘಿಸಿದ್ದು, ಸದರಿ ನಿಯಮಾವಳಿಯಂತೆ ಕುಲಪತಿ ಹುದ್ದೆಗೆ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರ ಹುದ್ದೆಯಲ್ಲಿ ಕನಿಷ್ಠ 10 ವರ್ಷಗಳ ಸೇವಾನುಭವ ಅರ್ಹತಾ ಮಾನದಂಡವಾಗಿದ್ದು, ಡಾ.ಎಸ್‌.ವಿದ್ಯಾಶಂಕರ್   ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಪ್ರಾಧ್ಯಾಪಕರಾಗಿರುತ್ತಾರೆ. ಬಹು ಮುಖ್ಯವಾಗಿ ಕುಲಪತಿ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ ಯುಜಿಸಿಯ ಪ್ರತಿನಿಧಿಯನ್ನು ಒಳಗೊಂಡಿಲ್ಲದಿರುವುದು ನೂನ್ಯತೆ  ಎಂದು ವಾದಿಸಲಾಗಿರುತ್ತದೆ.

ಮೇಲೆ ಹೇಳಿದ ಯುಜಿಸಿ ನಿಯಮಮಾವಳಿಗಳು ಜುಲೈ 2018ಕ್ಕೆ ಜಾರಿಗೆ ಬಂದಿರುತ್ತವೆ. ಪ್ರಶ್ನಿತ VTU VC ನೇಮಕಾತಿಯು 29.9.2022 ಕ್ಕೆ ಆಗಿರುತ್ತದೆ. ಹಾಗೂ ಕೇಂದ್ರ ಸರ್ಕಾರದ ನಿಯಮಗಳು ರಾಜ್ಯ ಸರ್ಕಾರದ ನಿಯಮಗಳನ್ನು override ಮಾಡುತ್ತವೆ . ಆದ್ದರಿಂದ ಹಾಲಿ VTU VC ನೇಮಕಾತಿಯು 2018ಯುಜಿಸಿ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂಬುದನ್ನೂ ಉಲ್ಲೇಖಿಸಲಾಗಿರುತ್ತದೆ.

ಇತ್ತೀಚಿಗೆ ಮೇಲಿನ ಯುಜಿಸಿ-2018 ನಿಯಮಾವಳಿಗಳ ಉಲ್ಲಂಘನೆಯ ಕಾರಣಕ್ಕೆ ಕೇರಳದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದ ತೀರ್ಪನ್ನು ಹಾಗೂ  ಗುಜರಾತ್ ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಉಚ್ಚ ನ್ಯಾಯಾಲಯಗಳ ತೀರ್ಪನ್ನು ಅರ್ಜಿದಾರರ ಪರ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.  ಮೇಲಿನ ಎರಡು ರಿಟ್ ಪ್ರಕರಣಗಳು ತೀರ್ಪಿಗೆ ರಿಸರ್ವ್ ಆಗಿರುತ್ತವೆ.

ಇದೇ ರೀತಿಯ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನ ಹಿಂದಿನ ತೀರ್ಪುಗಳ (Precedents) ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಷ್ಠಿತ ವಿ.ವಿಯಾದ VTU,  ಬೆಳಗಾವಿ ಇಲ್ಲಿನ ಕುಲಪತಿಯ ನೇಮಕಾತಿಯನ್ನು ಪ್ರಶ್ನಿಸಿರುವ ಮೇಲೆ ಹೇಳಿದ 2 ರಿಟ್ ಅರ್ಜಿಗಳಲ್ಲಿನ‌ ತೀರ್ಪಿನ ಬಗ್ಗೆ ಉನ್ನತ ಶೈಕ್ಷಣಿಕ ಹಾಗೂ ಸಾರ್ವಜನಿಕ ವಲಯಗಳಲ್ಲಿ ಕುತೂಹಲ ಹಾಗೂ ಮಹತ್ವ ಪಡದುಕೊಂಡಿದೆ.

Key words: Appointment – VTU –VC-cancell- High Court -reserves -judgment.