Thursday, September 17, 2026

BDA Apartments

ರಾಜ್ಯ ಸರ್ಕಾರದ ವಕ್ತಾರರಾಗಿ 5 ಸಚಿವರ ನೇಮಕ BDA JK_Adv BDA Adv
Home Front Page ರಾಜ್ಯ ಸರ್ಕಾರದ ವಕ್ತಾರರಾಗಿ 5 ಸಚಿವರ ನೇಮಕ.

ರಾಜ್ಯ ಸರ್ಕಾರದ ವಕ್ತಾರರಾಗಿ 5 ಸಚಿವರ ನೇಮಕ.

 ಬೆಂಗಳೂರು,ಮಾರ್ಚ್,13,2024(www.justkannada.in):  ರಾಜ್ಯ ಸರ್ಕಾರದ ವಕ್ತಾರರಾಗಿ ಐವರು ಸಚಿವರನ್ನು ನೇಮಕ ಮಾಡುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಿಸುವಂತೆ ಸಿಎಂ ಸಿದ್ದರಾಮಯ್ಯ  ಆದೇಶಿಸಿದ್ದಾರೆ ಎನ್ನಲಾಗಿದೆ.ರಾಜ್ಯ ಸರ್ಕಾರದ ವಕ್ತಾರರಾಗಿ 5 ಸಚಿವರ ನೇಮಕ vidhan

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ದಾಖಲೆಗಳು, ಸರ್ಕಾರದ ಮಾಹಿತಿಗಳ ಬಗ್ಗೆ ಸಚಿವರುಗಳಿಗೆ ಮಾಹಿತಿ ನೀಡುವಂತೆ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Key words: Appointment -5 Ministers – State Government- Spokesperson