ಸಿಎಂ ಆರ್ಥಿಕ ಸಲಹೆಗಾರರಾಗಿ ನೇಮಕ: ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ಹೀಗಿತ್ತು.

ಬೆಂಗಳೂರು,ಡಿಸೆಂಬರ್,30,2023(www.justkannada.in):  ತಾವು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿರುವ ಕುರಿತು ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಸವರಾಜ ರಾಯರೆಡ್ಡಿ,  ನನಗೆ ಯಾವುದೇ ಅಸಮಾಧಾವಿಲ್ಲ. ಅಸಮಾಧಾನದ ಪ್ರಶ್ನೆಯೇ ಇಲ್ಲ.  ಸಿಎಂಗೆ ಆರ್ಥಿಕ ಸಲಹೆಗಾರರು ಬೇಕೆಂದು ನನಗೆ ಹುದ್ದೆ ಕೊಟ್ಟಿದ್ದಾರೆ.  ನಮ್ಮ ವರಿಷ್ಠರು,  ಸಿಎಂ,  ಕೆಪಿಸಿಸಿ ಅಧ್ಯಕ್ಷರು ಈ ಹುದ್ದೆ ನೀಡಿದ್ದಾರೆ. ಈ ಹುದ್ದೆಯನ್ನ ಒಪ್ಪಿಕೊಂಡರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದರು. ಹೀಗಾಗಿ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಸಿಎಂ ಆರ್ಥಿಕ ಸಲಹೆಗಾರರ ಹುದ್ದೆ ನೀಡಿದ್ದಾರೆ.  ಇದು ಸವಾಲಿನ ಹುದ್ದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.

Key words: Appointed -Economic Adviser – CM-MLA -Basavaraja Rayareddy- reaction