Saturday, September 19, 2026

BDA Apartments

ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ತರಗತಿಗಳಿ...
Home Front Page ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್  ಕಾಲೇಜಿನಲ್ಲಿ ಡಿಪ್ಲೊಮೊ ತರಗತಿಗಳಿಗೆ ಅರ್ಜಿ ಆಹ್ವಾನ

ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್  ಕಾಲೇಜಿನಲ್ಲಿ ಡಿಪ್ಲೊಮೊ ತರಗತಿಗಳಿಗೆ ಅರ್ಜಿ ಆಹ್ವಾನ

ಮೈಸೂರು,ಮೇ,9,2019(www.justkannada.in): ಡಿಪ್ಲೊಮೊ ವ್ಯಾಸಂಗದಲ್ಲಿ ಆಸಕ್ತಿ ಇರುವ ವಿಶೇಷಚೇತನ ಅಭ್ಯರ್ಥಿಗಳಿಗೆ 2019-20ರ ಪ್ರಸಕ್ತ ಸಾಲಿನ ತರಗತಿಗಳಿಗೆ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್  ಕಾಲೇಜಿನಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ.

ದೇಶದಲ್ಲೇ ಮೊಟ್ಟಮೊದಲ ಹಾಗೂ ಏಕೈಕ ವಿಶೇಷ ಚೇತನರ ಪಾಲಿಟೆಕ್ನಿಕ್  ಕಾಲೇಜು ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್  ಕಾಲೇಜಿನ ಆವರಣದಲ್ಲಿ 1991ರಿಂದಲೇ ಪ್ರಾರಂಭವಾಗಿತ್ತು, ಈ ಕಾಲೇಜಿನಲ್ಲೆ  ಪ್ರಸಕ್ತ ಸಾಲಿನಲ್ಲಿ 6 ಡಿಪ್ಲೊಮೊ ಕೋರ್ಸ್ ಗಳನ್ನ ಪ್ರಾರಂಭಿಸಿದೆ.

ಡಿಪ್ಲೊಮೊ ಕೋರ್ಸ್  ಗಳಲ್ಲಿ ಆಸಕ್ತಿಯುಳ್ಳ ವಿಶೇಷ ಚೇತನರು ಜೂನ್ ತಿಂಗಳ 15ರ ವರಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಬಿ.ಇಳಂಗೋವನ್  ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದ್ದಾರೆ.

Key words: Application -Diploma Classes – Polytechnic- College – JSS