Thursday, November 5, 2026

Dasara Wishes

Happy Dasara
Home Front Page ಜನರ ಸಮಸ್ಯೆ ಪರಿಹರಿಸುವ ವ್ಯವದಾನ ಇಲ್ಲದಿದ್ದರೆ ಜನತಾ ದರ್ಶನವೆಂಬ ಬೂಟಾಟಿಕೆಯ ನಾಟಕ ಬೇಕೆ? ಬಿವೈ ವಿಜಯೇಂದ್ರ...

ಜನರ ಸಮಸ್ಯೆ ಪರಿಹರಿಸುವ ವ್ಯವದಾನ ಇಲ್ಲದಿದ್ದರೆ ಜನತಾ ದರ್ಶನವೆಂಬ ಬೂಟಾಟಿಕೆಯ ನಾಟಕ ಬೇಕೆ? ಬಿವೈ ವಿಜಯೇಂದ್ರ ಕಿಡಿ

ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,13,2024 (www.justkannada.in): ಸಿಎಂ ಸಿದ್ದರಾಮಯ್ಯರಿಗೆ  ಸಾರ್ವಜನಿಕರು ಸಲ್ಲಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇದ್ರ ಟ್ವಿಟ್ ಮಾಡಿ ಕಿಡಿಕಾರಿದ್ದಾರೆ.

ಈ ಕುರಿತು ‍ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ,  ‘ಮುಖ್ಯಮಂತ್ರಿಗಳ ಬಳಿ ಹೋದರೆ ಸಮಸ್ಯೆ ಬಗೆಹರಿಯುತ್ತದೆ’ ಎಂಬ ಭರವಸೆಯಿಂದ ಬಹುದೂರದಿಂದ ಪ್ರಯಾಸಪಟ್ಟು ಬಂದು ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಜನಸಾಮಾನ್ಯರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸುತ್ತಾರೆ.

ಆದರೆ ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳತ್ತ ಕಣ್ಣಾಡಿಸುವ ಮೊದಲೇ ಅವರ ಪತ್ರಗಳು ಕಸದ ರಾಶಿ ಸೇರಿರುವುದು ಜನರ ದೂರು-ದುಮ್ಮಾನಗಳಿಗೆ ಕಾಂಗ್ರೆಸ್ ಸರ್ಕಾರ ತೋರುತ್ತಿರುವ ಉಡಾಫೆ ವರ್ತನೆಗಳಿಗೆ ಕನ್ನಡಿ ಹಿಡಿದಿದೆ ಎಂದು ಟೀಕಿಸಿದ್ದಾರೆ.ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಜನಕಾಳಜಿಯ ಬಗ್ಗೆ ತಮ್ಮ ಹಳೆಯ ನೆನಪುಗಳನ್ನು ಉಲ್ಲೇಖಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೆರಳಿನಲ್ಲಿ ಜನರ ಬಗೆಗಿನ ತಾತ್ಸಾರ ನರ್ತಿಸುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸಿದೆ, ಇಂಥಾ ಅಪಚಾರದ ಅಮಾನವೀಯ ಕೃತ್ಯ ಯಾರಿಂದಲೇ ನಡೆದಿದ್ದರೂ ಅದರ ನೇರ ಹೊಣೆ ಮುಖ್ಯಮಂತ್ರಿಗಳೇ ಹೊರಬೇಕಿದೆ, ಈ ನಿಟ್ಟಿನಲ್ಲಿ ನೈತಿಕ ಜವಾಬ್ದಾರಿಯಿಂದ ಜನರಿಗೆ ಅವರು ಉತ್ತರಿಸಬೇಕಿದೆ.

ಜನರ ಸಮಸ್ಯೆಗಳನ್ನು ಪರಿಹರಿಸುವ ವ್ಯವದಾನ ಇಲ್ಲದಿದ್ದರೆ ಜನತಾ ದರ್ಶನವೆಂಬ ಬೂಟಾಟಿಕೆಯ ನಾಟಕ ಬೇಕೆ ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

Key words: Appeal letters, Janata Darshan, CM Siddaramaiah, BY Vijayendra