Friday, August 14, 2026

BDA Apartments

Home Front Page ಐದು ವರ್ಷ ತುಂಬಿದ ಸಿ.ಆರ್.ಪಿ ಮತ್ತು ಬಿ.ಆರ್.ಪಿಗಳಿಗೆ ಕೌನ್ಸಿಲಿಂಗ್ ನಲ್ಲಿ ಪ್ರಥಮ ಆದ್ಯತೆ ನೀಡುವಂತೆ ಮನವಿ...

ಐದು ವರ್ಷ ತುಂಬಿದ ಸಿ.ಆರ್.ಪಿ ಮತ್ತು ಬಿ.ಆರ್.ಪಿಗಳಿಗೆ ಕೌನ್ಸಿಲಿಂಗ್ ನಲ್ಲಿ ಪ್ರಥಮ ಆದ್ಯತೆ ನೀಡುವಂತೆ ಮನವಿ ಸಲ್ಲಿಕೆ.

ಮಂಡ್ಯ,ಜುಲೈ,10,2021(www.justkannada.in):  ಐದು ವರ್ಷ ತುಂಬಿದ  ಸಿ.ಆರ್.ಪಿ ಮತ್ತು ಬಿ.ಆರ್.ಪಿಗಳಿಗೆ ಕೌನ್ಸಿಲಿಂಗ್ ನಲ್ಲಿ ಪ್ರಥಮ ಆದ್ಯತೆ ನೀಡುವಂತೆ ಮನವಿಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರಿಗೆ ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.jk

ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡರವರು,  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ಪ್ರಧಾನ ಕಾರ್ಯದರ್ಶಿ ರೇವಣ್ಣ, ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಮಹದೇವ್, ಪರಮೇಶ್, ಮಂಜುನಾಥ್ ಹಾಗೂ ಮೈಸೂರು ಜಿಲ್ಲೆಯ ಬಿ.ಆರ್.ಪಿ ಮತ್ತು ಸಿ.ಆರ್.ಪಿಗಳ ಪ್ರತಿನಿಧಿಯಾಗಿ ವಚನ ಕುಮಾರಸ್ವಾಮಿ, ರಾಜು, ಕುಮಾರ್ ಆರ್, ಸ್ವಾಮಿರವರ ಉಪಸ್ಥಿತಿಯಲ್ಲಿ ಮನವಿ ನೀಡಲಾಯಿತು.

Key words: Appeal – five year- CRP -BRP – priority – counselling