Friday, September 18, 2026

BDA Apartments

ನಿಮ್ಮ ಹೇಳಿಕೆಗೆ ನೀವೇ ಕೊಡವರ ಬಳಿ ಕ್ಷಮೆಯಾಚಿಸಿ- ಸಿದ್ಧರಾಮಯ್ಯಗೆ ಹೆಚ್.ವಿಶ...
Home Front Page ನಿಮ್ಮ ಹೇಳಿಕೆಗೆ ನೀವೇ ಕೊಡವರ ಬಳಿ ಕ್ಷಮೆಯಾಚಿಸಿ- ಸಿದ್ಧರಾಮಯ್ಯಗೆ ಹೆಚ್.ವಿಶ್ವನಾಥ್ ಒತ್ತಾಯ…

ನಿಮ್ಮ ಹೇಳಿಕೆಗೆ ನೀವೇ ಕೊಡವರ ಬಳಿ ಕ್ಷಮೆಯಾಚಿಸಿ- ಸಿದ್ಧರಾಮಯ್ಯಗೆ ಹೆಚ್.ವಿಶ್ವನಾಥ್ ಒತ್ತಾಯ…

ಮೈಸೂರು,ಡಿಸೆಂಬರ್,24,2020(www.justkannada.in): ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೊಡವರ ಬಳಿ ಕ್ಷಮೆಯಾಚಿಸುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ  ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.Teachers,solve,problems,Government,bound,Minister,R.Ashok

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಸಿದ್ಧರಾಮಯ್ಯನವರ ಹೇಳಿಕೆ ಇದು ಕೊಡವರಿಗೆ ಮಾಡಿದ ಅವಮಾನ. ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ.ಒಂದು ಕಡೆ ಬಲಗೈ ದಲಿತರು ಮತಹಾಕಿಲ್ಲ ಹೇಳಿಕೆ ಕೊಡ್ತಾರೆ. ಇದರಿಂದ ಅವರ ಮತಬ್ಯಾಂಕ್ ಹಾಳಾಗಿದೆ. ನಿಮಗೆ ನೀವು ಸಿಎಂ ಆದ ಮೇಲೆ ಬೇರೆ ಯಾರು ಸಿಎಂ ಆಗಬಾರದು ಅನ್ನೋ ಮನೋಭಾವಿದೆ. ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದರು.apologize-those-gave-statement-mlc-h-vishwanath-insists-former-cm-siddaramaiah

140 ಸ್ಥಾನ ಗೆಲ್ಲುವ ಕಾಂಗ್ರೆಸ್‌ನಲ್ಲಿ 20 ಸ್ಥಾನ ಗೆಲ್ಲುವುದಿಲ್ಲವೇ ಅನ್ನೋ ಚರ್ಚೆ ಆರಂಭವಾಗಿದೆ. ಎಲ್ಲಿಗೆ ಬಂದು ನಿಂತಿದೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರೇ. ಇನ್ನಾದರೂ ನಿಮ್ಮ ದುರಂಹಕಾರದ ಮಾತನ್ನು ನಿಲ್ಲಿಸಿ. ನಿಮ್ಮ ಹೇಳಿಕೆಗೆ ನೀವೆ ಕೊಡವರ ಕ್ಷಮೆಯಾಚಿಸಿ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಆಗ್ರಹಿಸಿದರು.

Key words: Apologize -those – gave – statement- Mlc-H.Vishwanath -insists –former CM- Siddaramaiah