ಕ್ರಿಕೆಟ್’ನಿಂದಾಚೆಗೆ ರಾಜಕೀಯದ ಮೂಲಕ ಸುದ್ದಿಯಾದ ಸೌರವ್ ಗಂಗೂಲಿ

ಬೆಂಗಳೂರು, ಅಕ್ಟೋಬರ್ 14, 2022 (www.justkannada.in): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ  ಕ್ರಿಕೆಟ್ ನಿಂದಾಚೆಗೆ ರಾಜಕೀಯದ ಮೂಲಕ ಸುದ್ದಿಯಲ್ಲಿದ್ದಾರೆ.

ಪಶ್ಚಿಮ ಬಂಗಾಳದ ಜನರ ಪ್ರೀತಿ, ವಿಶ್ವಾಸ ಹೊಂದಿರುವ ಸೌರವ್ ಗಂಗೂಲಿಯವರನ್ನು ಬಿಜೆಪಿಗೆ ಕರೆತರಬೇಕೆಂಬ ಪ್ರಯತ್ನ ಬಿಜೆಪಿಯಲ್ಲಿ ಸಾಕಷ್ಟು ನಡೆದಿತ್ತು. ಆದರೆ ಇದಕ್ಕೆ ನಿರಾಸಕ್ತಿ ಹೊಂದಿದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ತೀವ್ರ ಬಯಕೆಯಲ್ಲಿ ದಾದಾ ಹಲವರ ಬೆಂಬಲವೇ ಸಿಗಲಿಲ್ಲ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ತಾಳಕ್ಕೆ ದಾದಾ ಕುಣಿಯಲಿಲ್ಲ. ಪರಿಣಾಮ ಇಂದು ಬಿಸಿಸಿಐ ಅಧ್ಯಕ್ಷ ಪಟ್ಟ ಬೇರೆಯವರ ಪಾಲಾಗುತ್ತಿದೆ. ಅವರಿಗೆ ಬೆಂಬಲ ಇಲ್ಲದಂತಾಗಿದೆ ಎಂಬ ಸುದ್ದಿಹರಿದಾಡುತ್ತಿದೆ.

ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಗಿದ ನಂತರವೂ ಕೊನೆಯ ಪ್ರಯತ್ನ ಎಂಬಂತೆ ಗೃಹ ಸಚಿವ ಅಮಿತ್ ಶಾ ಅವರು ಕೋಲ್ಕತ್ತಾದಲ್ಲಿರುವ ಗಂಗೂಲಿ ಮನೆಗೆ ಭೇಟಿ ನೀಡಿದ್ದರು.