ನೆಟ್ಟಿಗರ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರೋಶಕ್ಕೆ ಕಾರಣವೇನು?

ಮುಂಬೈ​:ಜುಲೈ-12:(www.justkannada.in) ವಿಶ್ವಕಪ್ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್​ ಎದುರು 18 ರನ್​ಗಳಿಂದ ಸೋಲನುಭವಿಸಿ ಟೂರ್ನಿಯಿಂದಲೇ ಹೊರಬಿದ್ದ ಬೆನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ​​ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಇದರಿಂದ ಗರಂ ಆದ ವಿರಾಟ್​ ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿ ಅನುಷ್ಕಾ ವಿರುದ್ಧ ಈ ರೀತಿಯ ಟ್ವೀಟ್ ಗಳು ಸರಿಯಲ್ಲ ಎಂದು ನೆಟ್ಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಕ್ರೀಡಾಂಗಣದಲ್ಲಿಯೇ ಮಲಗಿರುವ ರೀತಿ ಹಾಗೂ ಅವರ ಪಕ್ಕದಲ್ಲಿ ಅನುಷ್ಕಾ ಶರ್ಮಾ ಭಾವೋದ್ರೇಕವಾಗಿ ಕುಳಿತುಕೊಂಡಿರುವ ಫೋಟೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ. ಕೊಹ್ಲಿ ಅವರ ಕಳಪೆ ಪ್ರದರ್ಶನದಿಂದ ಅನುಷ್ಕಾ ಈ ರೀತಿ ಕುಳಿತುಕೊಂಡಿದ್ದಾರೆ ಎಂದು ಟ್ವೀಟ್​​ ಮಾಡಿದ್ದಾರೆ.

ಈ ರೀತಿ ಅನುಷ್ಕಾ ಅವರ ಫೋಟೊ ಬಳಸಿ ಟ್ರೋಲ್​ ಮಾಡಿರುವುದು ಇದು ಮೊದಲಲ್ಲ. 2015ನೇ ವಿಶ್ವಕಪ್​​​ನ ಸೆಮಿಫೈನಲ್​​​​ನಲ್ಲಿಯೂ ಭಾರತ-ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಈ ವೇಳೆ ನೆಟ್ಟಿಗರು ಅನುಷ್ಕಾ ಅವರ ಫೋಟೊ ಬಳಸಿ ಟ್ರೋಲ್​​ ಮಾಡಿದ್ದರು.

ಈ ಟ್ರೋಲ್​​ಗಳ ವಿರುದ್ಧ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ರೀತಿ ಅನುಷ್ಕಾ ಶರ್ಮಾ ಫೋಟೊ ಬಳಸಿ ಟ್ರೋಲ್​​ ಮಾಡುವವರಿಗೆ ನಾಚಿಕೆಯಾಗಬೇಕು. ಅನುಷ್ಕಾ ನನಗೆ ಯಾವಗಲೂ ಸಕಾರಾತ್ಮಕ ರೀತಿಯಲ್ಲಿವೇ ಪ್ರೋತ್ಸಾಹ ನೀಡುತ್ತಾರೆ. ಅವರ ಬಗ್ಗೆ ಈ ರೀತಿ ಟ್ರೋಲ್​ ಮಾಡುವುದು ಒಳ್ಳೆಯದಲ್ಲ’ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ನೆಟ್ಟಿಗರ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರೋಶಕ್ಕೆ ಕಾರಣವೇನು?
Anushka Sharma’s Sui Dhaaga Memes Takes Over Internet As Virat Kohli-led India Lose World Cup Semifinal