ಕಾಂಗ್ರೆಸ್  ಹಿಂದೂಗಳನ್ನ ನೆಮ್ಮದಿಯಾಗಿರಲು ಬಿಡಲ್ಲ -ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ.

ಚಿಕ್ಕಮಗಳೂರು,ಜನವರಿ,5,2024(www.justkannada.in): ಕಾಂಗರೆಸ್ ನದ್ದುಹಿಂದೂ ವಿರೋಧಿ  ಡಿಎನ್ಎ ಹಿಂದೂಗಳನ್ನ ನೆಮ್ಮದಿಯಾಗಿರಲು ಬಿಡಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ದತ್ತಪೀಠ ಹೋರಾಟಗಾರರ ಕೇಸ್ ರೀ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಶಾಸಕ ಸಿ.ಟಿ ರವಿ, ದೇಶ ತುಂಡು ಮಾಡಲು ಸಹಿ ಹಾಕಿದ್ದೇ ಕಾಂಗ್ರೆಸ್. ಹಿಂದೂಗಳನ್ನ ನೆಮ್ಮದಿಯಾಗಿರಲು ಅವರು ಬಿಡಲ್ಲ. ಮತಬ್ಯಾಂಕ್  ರಾಜನೀತಿಯಿಂದ ರಾಮಮಂದಿರಕ್ಕೂ ಅಡ್ಡಿ. ರಾಮಮಂದಿರ ಉದ್ಘಾಟನೆಯನ್ನ  ಕಾಂಗ್ರೆಸ್ ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು.

ದತ್ತಪೀಠದಲ್ಲಿ ಭಗವಾ ಧ್ವಜ ಹಾರಿಸಿದ್ದಕ್ಕೆ ಕೇಸ್  ಹಾಕಿದ್ದಾರೆ.  7 ವರ್ಷದ ಹಿಂದಿನ ಪ್ರಕರಣವನ್ನ ರೀ ಓಪನ್ ಮಾಡಿದ್ದಾರೆ. ಭಗವಾಧ್ವಜ ಹಾರಿಸಿದ್ದೆ ಕಾಂಗ್ರೆಸ್ ದೃಷ್ಠಿಯಲ್ಲಿ ಅಪರಾಧ. ಈ ಸರ್ಕಾರ ಇರೋದೇ ಹಿಂದೂ ವಿರೋಧಿಗಳಿಗೆ ಪ್ರೇರಣೆ ನೀಡಲು ಎಂದು ಕಿಡಿಕಾರಿದರು.

Key words: Anti-Hindu -DNA – Congress – ex-minister- CT Ravi