ನ.21 ರಿಂದ ಹಿಂದಿ ವಿರೋಧಿ ಚಳುವಳಿ: ಹೋರಾಟಕ್ಕೆ ರಾಜ್ಯದ ಜನರು ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್ ಕರೆ.

ಮೈಸೂರು,ನವೆಂಬರ್,3,2021(www.justkannada.in):   ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಮೈಸೂರಿನಲ್ಲಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಹಿಂದಿ ಭಾಷೆ ವಿರುದ್ಧ ಕರಾಳ ದಿನ ಆಚರಣೆ ಮಾಡಲಾಗುತ್ತದೆ. ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ನವೆಂಬರ್ 21 ರಿಂದ ಹಿಂದಿ ವಿರೋಧಿ ಚಳುವಳಿ ನಡೆಸಲಾಗುತ್ತದೆ. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಹೋರಾಟಕ್ಕೆ ಕರ್ನಾಟಕದ ಜನರು ಬೆಂಬಲ ನೀಡುವಂತೆ ಕರೆ ನೀಡಿದರು.

ಬ್ಯಾಂಕ್ ನಲ್ಲಿ ಹಿಂದಿ ಬರಹದ ಚೆಕ್ ಕೊಡ್ತಾರೆ.  ಬ್ಯಾಂಕ್ ಗಳಿಗೆ‌ ಕನ್ನಡಿಗರ ಹಣ ಬೇಕು, ಆದರೆ ಕನ್ನಡ ಭಾಷೆ ಬೇಡ. ಇದರ ವಿರುದ್ಧ ಬ್ಯಾಂಕ್ ಗಳಿಗೆ ನುಗ್ಗುತೇವೆ. ರಾಜ್ಯದ ಸಂಸದರು ಹಿಂದಿಯ‌ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕು. ಹಿಂದಿಯ‌ ವಿರುದ್ಧ ಇಡೀ ರಾಜ್ಯ ಒಂದಾಗಬೇಕಾಗಿದೆ. ಹಿಂದಿ‌ ಹೇರಿಕೆಯಿಂದ ಕನ್ನಡ ಬೆಳೆಯಲ್ಲ, ಕನ್ನಡಕ್ಕೆ ಅವಮಾನ ಆಗುತ್ತೆ. ರಾಜ್ಯದಲ್ಲಿ ಗುಜರಾತಿ, ತಮಿಳು, ಮಲಯಾಳಿಗಳು ತಿಂದು ತೇಗುತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದಿ ಪ್ರಬಲ ಆಗಿ ಕನ್ನಡ ಪತ್ರಿಕೋದ್ಯಮಕ್ಕೆ ಅಪಾಯ ಆಗುತ್ತೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಿಂದಿ ಹೀರಿಕೆ ವಿರುದ್ದ ಕ್ರಿಯಾ ಸಮಿತಿ ರಚನೆ ಮಾಡುತ್ತೇವೆ. ರಾಜ್ಯದಲ್ಲಿ ಹಿಂದಿ ಹೇರಿಕೆಯಲ್ಲಿ ಬಿಜೆಪಿ, ಆರ್.ಎಸ್.ಎಸ್ ಪಾತ್ರ ಇದೆ. ಸರ್ಕಾರಿ ಸಮಾರಂಭದಲ್ಲಿ ಕನ್ನಡದಲ್ಲಿ ನಡೆಯಬೇಕು. ಕನ್ನಡ ಬಿಟ್ಟು ಯಾವುದೇ ಸಮಾರಂಭ ನಡೆಸಿದ್ರೆ ನಾವು ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಗ್ರಾಮ ಪಂಚಾಯತ್ ಸದಸ್ಯರ ಸಂಬಳ ಕೇವಲ ಒಂದು ಸಾವಿರ. ಇದು ನಿಜಕ್ಕೂ ಅಗೌರವ, ಕನಿಷ್ಠ ಸಂಬಳ 5 ಸಾವಿರ ನೀಡಬೇಕು. ಗ್ರಾಮ ಪಂಚಾಯತಿಗಳಿಗಳಿಗೆ ಹಣ ಬಿಡುಗಡೆ ಮಾಡಬೇಕು. ಇದರ‌ ವಿರುದ್ದ ಮೈಸೂರು ಚಾಮರಾಜನಗರ ತಾಲೂಕಿನ ಕಾರ್ಯಾಲಯಗಳ ಬಳಿ‌ ಪ್ರತಿಭಟನೆ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಉಪಚುನಾವಣೆ ಫಲಿತಾಂಶದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಾಟಾಳ್ ನಾಗರಾಜ್, ಈ‌ ಚುನಾವಣೆ ಮುಖ್ಯಮಂತ್ರಿ ಗಳ ಮೇಲೆ‌ ಯಾವುದೇ ಪ್ರಭಾವ ಬೀರಿಲ್ಲ. ಇದರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಅಪಾಯ ಇಲ್ಲ ಎಂದರು.

Key words: anti-Hindi movement – Vatal Nagaraj – state – support

ENGLISH SUMMARY…

Anti-Hindi movement from Nov. 21: Kannada activist Vatal Nagaraj calls to support
Mysuru, November 3, 2021 (www.justkannada.in): Kannada activist Vatal Nagaraj today staged a protest in Mysuru, expressing his ire upon the Union Government against the imposition of Hindi language in the State.
He staged a demonstration at the Jayachamarajendra circle and shouted slogans against the Union Government. He observed that he would call the citizens of the state to observe ‘Black Day’ against the imposition of Hindi. “An anti-Hindi movement will be held in the State from the Kannada Chaluvali Vatal Paksha, from November 21. A huge protest rally will be held at Bengaluru,” he said and requested the people of the State to support him.
Keywords: Kannada activist/ Vatal Nagaraj/ demonstration/ protest/anti-hindi protest