ಮತಾಂತರ ನಿಷೇಧದ ಸುಗ್ರೀವಾಜ್ಞೆಯು ಉದ್ಯೋಗಗಳನ್ನು ಸೃಷ್ಟಿಸುವುದೇ.? – ಡಿ.ಕೆ ಶಿವಕುಮಾರ್ ಟೀಕೆ.

ಬೆಂಗಳೂರು,ಮೇ,18,2022(www.justkannada.in): ರಾಜ್ಯಾದ್ಯಂತ ಕೋಮು ಆಧಾರಿತ ಬೆಳವಣಿಗೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಹಿಜಾಬ್‌ ನಿಂದ  ಹಿಡಿದು ಆಝಾನ್ ವರೆಗೆ ಹಲವು ವಿವಾದಗಳು ಹೊಗೆಯಾಡುತ್ತಿರುವ ಬೆನ್ನಲ್ಲೇ, ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಚರ್ಚಿಸದೆ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಜರೂರತ್ತು ಏನಿತ್ತು.?” ಎಂದು ಟ್ವೀಟ್ ಮೂಲಕ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

“ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ.? ಆಕ್ಸಿಜನ್‌ ಸಿಗದೆ ಕೋವಿಡ್‌ ಸಮಯದಲ್ಲಿ ಸತ್ತವರಿಗೆ ಇದು ಮರುಜೀವ ನೀಡುವುದೇ.?” ಎಂದು ಮತಾಂತರ ಕಾಯ್ದೆಯ ಅನುಷ್ಠಾನದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇದು, ಸುಳ್ಳು ಆರೋಪಗಳ ಮೇಲೆ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ತಂತ್ರವೇ.?” ಎಂದೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಡಿ.ಕೆ ಶಿವಕುಮಾರ್, ಸರ್ಕಾರದ ಈ  ಅಸಾಂವಿಧಾನಿಕ ನಡೆಯನ್ನು ಖಂಡಿಸಿದ್ದಾರೆ.

Key words: anti-conversion-ordinance- create -new jobs – DK Shivakumar

ENGLISH SUMMARY…

Will this anti-conversion ordinance create new jobs? – DK Shivakumar

Bengaluru: Karnataka Congress President DK Shivakumar has raised questions over the State government’s urgency to bring out the anti-conversion law via an ordinance, conveniently bypassing the due process of debate and discussion in the assembly and the council.

The senior Congress leader remarked, “What is the great hurry to bring an anti-conversion law via ordinance, avoiding debate in the assembly and the council?”

Highlighting how the law fails to address more pressing issues at hand, he questioned, “Will it create jobs?”

Further emphasising how the State government is not focusing on the people’s welfare and the development of the region, he said that the law would not bring back the lives of those who died due to the want of oxygen in Covid.

He asked whether the law would be “used as a ploy to persecute minorities on fake charges?” highlighting the BJP’s misplaced priorities in times when concerted efforts are required for the overall development of the state.