ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ: ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ.

ಹಾವೇರಿ,ಫೆಬ್ರವರಿ,1,2023(www.justkannada.in):  ಇಂದು ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಅನುದಾನ ಘೋಷಣೆಯಾದ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಧನ್ಯವಾದ ಅರ್ಪಿಸಿದ್ದಾರೆ.

ಬಜೆಟ್ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ  ರೂ. ಅನುದಾನ ಘೋಷಣೆ ಮಾಡಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರಹಣಕಾಸು ಸಚಿವೆ  ನಿರ್ಮಲ ಸೀತಾರಾಮನ್ ಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ.

ಭದ್ರಮೇಲ್ದಂಡೆ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಅನುದಾನ ಘೋಷಿಸಿದ್ದು ಸಂತಸದ ಸಂಗತಿ. ರಾಷ್ಟ್ರೀಯ ಯೋಜನೆ ಮಾಡುವಂತೆ ಮೊದಲೇ ಪ್ರಸ್ತಾವನೆ ಕಳಿಸಿದ್ದವು ಭದ್ರಾ ಮೇಲ್ದಂಡೆ ಯೋಜನೆ ಬಹಳ ಪ್ರಮುಖವಾದದ್ದು ಎಂದರು.

Key words: Announcement – grant – Bhadra Upper Bank –Project-CM Bommai -thanked -Centre.