Tuesday, August 4, 2026

BDA Apartments

Home Front Page ಯುವಕರಿಗೆ ಅವಕಾಶ ಕೊಡಲು ಚುನಾವಣಾ ನಿವೃತ್ತಿ ಘೋಷಣೆ- ಮಾಜಿ ಸಿಎಂ ಡಿ.ವಿ ಸದಾನಂದಗೌಡ.

ಯುವಕರಿಗೆ ಅವಕಾಶ ಕೊಡಲು ಚುನಾವಣಾ ನಿವೃತ್ತಿ ಘೋಷಣೆ- ಮಾಜಿ ಸಿಎಂ ಡಿ.ವಿ ಸದಾನಂದಗೌಡ.

ಬೆಂಗಳೂರು,ನವೆಂಬರ್,9,2023(www.justkannada.in): ಯುವಕರಿಗೆ ಅವಕಾಶ ಕೊಡುವ ಸಲುವಾಗಿ  ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದೇನೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡರು ಹೇಳಿದರು.

ತಮ್ಮ ಚುನಾವಣಾ ನಿವೃತ್ತಿ ಕುರಿತು ಮಾತನಾಡಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ, ಪಕ್ಷದಲ್ಲಿ ಇನ್ನು ಯಾವ ಹೊಣೆ ಬೇಕಾಗಿಲ್ಲ. ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಯುವಕರಿಗೆ ಅವಕಾಶ ಕೊಡಲು ನಿವೃತ್ತಿ ಘೋಷಣೆ  ಮಾಡಿದ್ದೇನೆ ಎಂದರು.

ನನ್ನ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ.  ಪಕ್ಷದ ಕೆಲಸ ಮಾಡಲು ಅವಕಾಶ ಕೊಟ್ಟರೇ ಸಾಕು. ನಾನು ಬಿಜೆಪಿಯಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಎಲ್ಲಾ ರೀತಿಯ ಸ್ಥಾನ ಪಡೆದಿದ್ದೇನೆ. ಪಕ್ಷ ಸೇರಿ  25 ವರ್ಷವಾದ ಮೇಲೆ ನಿವೃತ್ತಿಗೆ ಯೋಚನೆ ಮಾಡಿದ್ದೆ. ಆದರೆ ನಾಯಕರ ಮನವೊಲಿಕೆಗೆ ಮಣಿದು ಸ್ಪರ್ಧಿಸಿದ್ದೆ ಎಂದು ಡಿ.ವಿ ಸದಾನಂದಗೌಡ ತಿಳಿಸಿದರು.

Key words: Announcement – electoral- retirement – Former CM- DV Sadananda Gowda.