ಮುಂದಿನ ರಾಜಕೀಯ ನಡೆ ಬಗ್ಗೆ ಮಂಡ್ಯದಲ್ಲೇ ಘೋಷಣೆ ಮಾಡುತ್ತೇನೆ- ಸಂಸದೆ ಸುಮಲತಾ ಅಂಬರೀಶ್.

ಬೆಂಗಳೂರು,ಮಾರ್ಚ್,10,2023(www.justkannada.in): ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್  ಇಂದು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಇಂದು ಮಂಡ್ಯದಲ್ಲಿ ಸುದ್ಧಿಗೋಷ್ಠಿ ನಡೆಸುವ ಸಂಸದೆ ಸುಮಲತಾ ಅಂಬರೀಶ್ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಿಸಲಿದ್ದಾರೆ. ಹಾಗೆಯೇ ಹಲವು ಬಿಜೆಪಿ ನಾಯಕರ ಜೊತೆ ಈಗಾಗಲೇ ಸುಮಲತಾ ಅಂಬರೀಶ್ ಚರ್ಚಿಸಿದ್ದು ಬಿಜೆಪಿ ಸೇರುವ ಸಾಧ್ಯತೆ ಇದೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸುಮಲತಾ ಅವರು,  ನನ್ನ ಮುಂದಿನ ರಾಜಕೀಯ  ನಡೆ ಬಗ್ಗೆ ಮಂಢ್ಯದಲ್ಲೇ ಘೋಷಣೆ ಮಾಡುತ್ತೇನೆ. ಎಲ್ಲಾ ವಿಚಾರಗಳ ಬಗ್ಗೆ ಮಂಡ್ಯದಲ್ಲೇ ತಿಳಿಸುತ್ತೇನೆ ಎಂದಿದ್ದಾರೆ. ಈಗಾಗಲೇ ಮಂಡ್ಯದತ್ತ ತೆರಳಿದ್ದಾರೆ.

Key words: announcement- about –next- political move – MP -Sumalatha Ambarish.