Tuesday, August 4, 2026

BDA Apartments

Home Front Page ಪಡಿತರದಾರರಿಗೆ ಚೀಟಿ ಜೊತೆಗೆ ಅನ್ನಭಾಗ್ಯದ ಸ್ಮಾರ್ಟ್ ಕಾರ್ಡ್- ಆಹಾರ ಸಚಿವ ಕೆ.ಎಚ್ ಮುನಿಯಪ್ಪ.

ಪಡಿತರದಾರರಿಗೆ ಚೀಟಿ ಜೊತೆಗೆ ಅನ್ನಭಾಗ್ಯದ ಸ್ಮಾರ್ಟ್ ಕಾರ್ಡ್- ಆಹಾರ ಸಚಿವ ಕೆ.ಎಚ್ ಮುನಿಯಪ್ಪ.

ಕೋಲಾರ,ನವೆಂಬರ್,23,2023(www.justkannada.in):  ಶೀಘ್ರದಲ್ಲೇ ‘ಪಡಿತದಾರರಿಗೆ ಚೀಟಿ ಜೊತೆಗೆ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲು ಚಿಂತಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದರು.

‘ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್‌ದಾರರಿಗೆ ಹಣ ಸಂದಾಯ ಮಾಡಿದ್ದೇವೆ. ಶೇ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ ಏಳು ಲಕ್ಷ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆ ಇದೆ. ಅಂಥವರಿಗೆ ಹಣ ತಲುಪಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಶೇ. 100 ಸಾಧನೆ ಮಾಡಲಿದ್ದೇವೆ’ ಎಂದು ತಿಳಿಸಿದರು.

Key words: Annabhagya- Smart Card- along – BPL card- Food Minister -K.H Muniyappa.