ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ: ಡಿಕೆ ಶಿವಕುಮಾರ್ ಹೇಳಿಕೆಗೆ ಹೆಚ್.ಡಿಕೆ ತಿರುಗೇಟು.

ಬೆಂಗಳೂರು, ಜನವರಿ 8,2024(www.justkannada.in): ‘ಅನ್ನಭಾಗ್ಯ’ ಅಕ್ಕಿಯಿಂದಲೇ ಅಯೋಧ್ಯೆಯ ರಾಮ ಮಂದಿರದ ಆಹ್ವಾನದ ಮಂತ್ರಾಕ್ಷತೆಯನ್ನು ಕೊಡುತ್ತಿದ್ದಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ  ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ,  ಅಕ್ಕಿಯನ್ನು ದೊಡ್ಡ ಆಲಹಳ್ಳಿಯಲ್ಲಿ ಬೆಳೆದು ಕಳುಹಿಸಿರುವುದಾ? ರಾಮಮಂದಿರಕ್ಕೆ ಹೋಗಲು ಆಹ್ವಾನ ಕೊಡಬೇಕಾ..? ರಾಮಮಂದಿರಕ್ಕೆ ಎಲ್ಲರೂ ಬರಬಹುದು ಎಂದು ಪ್ರಧಾನಿ ಹೇಳಿದ್ದಾರೆ. ಕಾರ್ಯಕ್ರಮ ನಡೆಯುವ ದಿನ ದೊಡ್ಡಮಟ್ಟದಲ್ಲಿ ಜನರು ಸೇರುತ್ತಾರೆ. ಮುಂದೆ ಸಾರ್ವಜನಿಕರಿಗೂ ಅವಕಾಶ ಇದೆ, ಆಗ ಹೋಗಬಹುದು. ರಾಮನ ಮೇಲೆ ಭಕ್ತಿ ಇರುವವರು ಹೋಗಬಹುದು ಎಂದರು.

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಸಿಎಂ ಅವರ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರೇ ಹೇಳುತ್ತಿದ್ದಾರೆ. ಸರ್ಕಾರ ಬಂದು 8 ತಿಂಗಳಾಗಿದೆ. ಬರ ಪರಿಹಾರ ವಿಚಾರದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಗೊತ್ತಿದೆ. 2 ಸಾವಿರ ರೂಪಾಯಿ ಎಷ್ಟು ಜನಕ್ಕೆ ಹೋಗಿದೆ ಅನ್ನೋದು ಗೊತ್ತಿದೆ. ಮಂತ್ರಿಗಳು ಅಧಿಕಾರದ ವ್ಯಾಮೋಹದಿಂದ ಇನ್ನು ದೂರ ಬಂದಿಲ್ಲ ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

Key words: Annabhagya –rice-mantrakshate- HDK – DK Shivakumar- statement.